ಮೋದಿಗೆ ಬೈದ, ಮಹಿಳೆಯರಿಗೆ ಬೆದರಿಕೆ ಹಾಕಿದ ಆರೋಪ : ಮೈಸೂರಲ್ಲಿ ವ್ಯಕ್ತಿಗೆ ಗುಂಪು ಥಳಿತ, ಧಾರ್ಮಿಕ ಅವಹೇಳನ

Update: 2022-01-13 09:01 GMT
Video Screengrab

ಮೈಸೂರು: ವ್ಯಕ್ರಿಯೋರ್ವ ಬಸ್‌ ನಲ್ಲಿ ಮಹಿಳೆಯನ್ನು ಅಸಭ್ಯವಾಗಿ ನಿಂದಿಸಿದ್ದಾನೆ ಎಂದು ಆರೋಪಿಸಿ ಮಹಿಳೆ ಹಾಗೂ ಇನ್ನಿತರ ಆಗಂತುಕರು ವ್ಯಕ್ತಿಯೋರ್ವನನ್ನು ಥಳಿಸುತ್ತಿರುವ ಹಾಗೂ ಮತೀಯ ನಿಂದನೆ ಮಾಡುತ್ತಿರುವ ವೀಡಿಯೊವೊಂದು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ. 

ಮೈಸೂರಿನ ಸ್ಯಾನಿಟೋರಿಯಂನಲ್ಲಿ ಮುಸ್ಲಿಂ ಯುವಕನೋರ್ವ ಬಸ್‌ ನಲ್ಲಿ ಮಹಿಳೆಯರಿಗೆ ತೊಂದರೆ ಕೊಡುತ್ತಿದ್ದ" ಎಂದು ಮಹಿಳೆಯೋರ್ವರು ಹೇಳುತ್ತಿರುವುದು ವೀಡಿಯೊದ ಪ್ರಾರಂಭದಲ್ಲಿ ಕಂಡು ಬಂದಿದೆ. ಬಳಿಕ ಅಲ್ಲಿ ನೆರೆದಿರುವವರು ಆತನನ್ನು ಥಳಿಸುವುದು, "ನೀವು ಹಿಂದೂಗಳ ಉಚ್ಚೆ ಕುಡಿದು ಬದುಕುವವರು" ಎಂದು ಮಹಿಳೆ ನಿಂದಿಸುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ.

"ಅವ್ವಾ.. ನಾನೇನು ಮಾಡಿಲ್ಲ. ನನ್ನ ಬಗ್ಗೆ ಸುಳ್ಳು ಹೇಳ್ಬೇಡಿ. ನಾನು ಬೈದಿರೋದು ಆತನಿಗೆ ಹೊರತು ಈ ಹೆಂಗಸಿಗಲ್ಲ" ಎಂದು ವ್ಯಕ್ತಿ ಪದೇ ಪದೇ ಹೇಳುತ್ತಿದ್ದರೂ ಆತನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದೇ ಮತೀಯ ನಿಂದನೆ ಮಾಡುತ್ತಿರುವುದು ವೀಡಿಯೋದಲ್ಲಿ ಕಂಡುಬಂದಿದೆ. "ಮೋದಿ ಬಗ್ಗೆ ಏನ್‌ ಮಾತಾಡ್ತೀಯ" ಅಂತ ಕೇಳಿ ಗುಂಪು ನೆರೆದವರನ್ನು ಉದ್ರೇಕಿಸುತ್ತಿರುವುದು ಮತ್ತು ಆತನ ಮೇಲೆ ಹೊಸ ಆರೋಪಗಳನ್ನು ಹೊರಿಸುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ. 

ಈ ವೀಡಿಯೊವನ್ನು ಶಿವಭಗತ್‌ ಭಗತ್‌ ಸಿಂಗ್‌ ಎಂಬಾತ ಫೇಸ್‌ ಬುಕ್‌ ಖಾತೆಯಿಂದ "ಸಂಘೇಶಕ್ತಿ ಕಲಿಯುಗೇ (ಕಲಿಯುಗದಲ್ಲಿ ಸಂಘಶಕ್ತಿಯಿಂದ ಮಾತ್ರ ಧರ್ಮರಕ್ಷಣೆ ಶಾಂತಿ ಸಮೃದ್ಧಿ)" ಎಂಬ ಫೇಸ್‌ ಬುಕ್‌ ಗ್ರೂಪ್‌ ಗೆ ಶೇರ್‌ ಮಾಡಲಾಗಿದೆ. ಈತನೇ ಈ ಗ್ರೂಪ್‌ ನ ಅಡ್ಮಿನ್‌ ಕೂಡಾ ಆಗಿದ್ದಾನೆ. ಈಗಾಗಲೇ ವೀಡಿಯೊ ನೂರಕ್ಕೂ ಹೆಚ್ಚು ಶೇರ್‌ ಗಳಾಗಿದ್ದು, ಸಾವಿರಾರು ವೀಕ್ಷಣೆಗಳನ್ನು ಪಡೆದಿದೆ. ಹಲವಾರು ಜನರು ಈ ವೀಡಿಯೊ ಕುರಿತು ಪ್ರಚೋದನಾತ್ಮಕ ಮತ್ತು ನಿಂದನಾತ್ಮಕ ಕಮೆಂಟ್‌ ಗಳನ್ನೂ ಮಾಡಿದ್ದಾರೆ. ಪ್ರಕರಣದ ಸಂಪೂರ್ಣ ವಿವರ ಮತ್ತು ಪೊಲೀಸರು ಈ ಕುರಿತು ಕ್ರಮ ಕೈಗೊಂಡಿದ್ದಾರೇ ಎಂದು ತಿಳಿದು ಬಂದಿಲ್ಲ. 

ಆ ವೀಡಿಯೋ ಇಲ್ಲಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News