ಪಂಜಾಬ್ ಸಿಎಂ ಅಭ್ಯರ್ಥಿಯನ್ನು ಜನತೆಯೇ ಆಯ್ಕೆ ಮಾಡುತ್ತಾರೆ: ಅರವಿಂದ ಕೇಜ್ರಿವಾಲ್

Update: 2022-01-13 09:03 GMT

ಚಂಡಿಗಡ: ತಮ್ಮ ಪಕ್ಷದ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಜನವರಿ 17 ರಂದು ಜನರಿಂದ ಟೆಲಿ ಮತದಾನದ ಆಧಾರದ ಮೇಲೆ ಹೆಸರಿಸುವುದಾಗಿ ಎಎಪಿ ಮುಖ್ಯಸ್ಥ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹೇಳಿದ್ದಾರೆ.

"ಪಕ್ಷವೊಂದು ಸಾರ್ವಜನಿಕರಿಗೆ ತಮ್ಮ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತಿರುವುದು ಇದೇ ಮೊದಲು" ಎಂದು ಅವರು ಹೇಳಿದರು.

"ಪಂಜಾಬ್‌ನ ಜನರು 7074870748 ಗೆ ಕರೆ ಮಾಡಬಹುದು.  ವಾಟ್ಸ್ ಆ್ಯಪ್  ಅಥವಾ ಎಸ್ ಎಂ ಎಸ್ ಮಾಡಬಹುದು ಹಾಗೂ  ಅವರ ಆಯ್ಕೆಯನ್ನು ಹೆಸರಿಸಬಹುದು. ಫೋನ್ ಸಂಖ್ಯೆಯು ಜನವರಿ 17 ರಂದು ಸಂಜೆ 5 ಗಂಟೆಯವರೆಗೆ ತೆರೆದಿರುತ್ತದೆ. ನಾವು ಪ್ರತಿಕ್ರಿಯೆಗಳನ್ನು ಪರಿಶೀಲಿಸುತ್ತೇವೆ ಮತ್ತು ಪ್ರತಿಕ್ರಿಯೆಯನ್ನು ಆಧರಿಸಿ, ನಮ್ಮ ಪಕ್ಷವು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ" ಎಂದು ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದರು.

ಪಕ್ಷವು ‘’ಓಟ್’’ ಎಂದು  ಘೋಷಿಸುವ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಿತು. "ಜನತಾ ಚುನೇಗಿ ಅಪ್ನಾ ಮುಖ್ಯಮಂತ್ರಿ (ಜನರು ತಮ್ಮ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ) 7074870748 ಗೆ ಕರೆ ಮಾಡಿ" ಎಂದು ಅದರಲ್ಲಿ ಬರೆಯಲಾಗಿದೆ

ದೀರ್ಘಸಮಯದಿಂದ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ  ಎಎಪಿ ಸಂಸದ ಭಗವಂತ್ ಮಾನ್‌ಗೆ ಈ ಕ್ರಮವು ಭಾರಿ ನಿರಾಶಾದಾಯಕವಾಗಿದೆ ಹಾಗೂ  ಫೆಬ್ರವರಿ 14 ರಂದು ನಡೆಯಲಿರುವ ಪಂಜಾಬ್ ಚುನಾವಣೆಗೆ ಪಕ್ಷವು ತನ್ನನ್ನು ಸಿಎಂ ಆಗಿ  ಹೆಸರಿಸಲು ಕಾಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News