ಅಸ್ಸಾಂ ಡಿಎಸ್ ಪಿ ಆಗಿ ಒಲಿಂಪಿಕ್ಸ್ ಪದಕ ವಿಜೇತೆ ಬಾಕ್ಸರ್ ಲವ್ಲೀನಾ ಬೋರ್ಗಹೈನ್ ನೇಮಕ

Update: 2022-01-13 12:45 GMT
Photo: twitter

ಹೊಸದಿಲ್ಲಿ: ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತ ಬಾಕ್ಸರ್ ಲವ್ಲೀನಾ ಬೋರ್ಗಹೈನ್ ಅವರು ಬುಧವಾರ ಅಸ್ಸಾಂ ಪೊಲೀಸ್‌ ಇಲಾಖೆಗೆ ತರಬೇತಿ ಉಪ ಅಧೀಕ್ಷಕರಾಗಿ (ಡಿವೈಎಸ್‌ಪಿ) ಸೇರ್ಪಡೆಗೊಂಡರು, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಸಮಾರಂಭದಲ್ಲಿ ಪಾಲ್ಗೊಂಡರು,

ಸರಿಯಾದ ಸಮಯದಲ್ಲಿ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಕೇಡರ್‌ಗೆ ಸೇರ್ಪಡೆಗೊಳ್ಳುವ ವಿಶ್ವಾಸವನ್ನು ಲವ್ಲೀನಾ ಬೊರ್ಗೊಹೈನ್  ವ್ಯಕ್ತಪಡಿಸಿದರು.

ಭಾವುಕರಾದ ಬೊರ್ಗೊಹೈನ್ ಅವರು ಪೊಲೀಸ್ ಇಲಾಖೆಗೆ ಧನ್ಯವಾದ ಅರ್ಪಿಸಿದರು. ಹಾಗೂ  ರಾಜ್ಯಕ್ಕೆ ಹೆಚ್ಚಿನ ಕೀರ್ತಿ ತರಲು ತನ್ನ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ದೃಢಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಹಿಮಂತ ಬಿಸ್ವಾ ಶರ್ಮಾ, ಕಳೆದ ವರ್ಷದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೊರ್ಗೊಹೈನ್ ಬಾಕ್ಸಿಂಗ್‌ನಲ್ಲಿ ಕಂಚು ಗೆದ್ದಿರುವುದು ಬಹುಶಃ ರಾಜ್ಯದ ಕ್ರೀಡಾ ಇತಿಹಾಸದ ಅತ್ಯಂತ ಅದ್ಭುತ ಕ್ಷಣಗಳಲ್ಲಿ ಒಂದಾಗಿದೆ. ಬಾಕ್ಸರ್  ವಯಸ್ಸನ್ನು ಗಮನಿಸಿದರೆ  ಅವರು  ಕೆಲವು ವರ್ಷ ಅಸ್ಸಾಂ ಪೊಲೀಸ್ ಸೇವೆಯಲ್ಲಿ (ಎಪಿಎಸ್) ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯವಾಗುತ್ತದೆ ಹಾಗೂ  ನಂತರ ಅವರನ್ನು ಐಪಿಎಸ್ ಕೇಡರ್‌ಗೆ ಸೇರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News