ಸುಧೀರ್ ಚೌಧರಿ ಫೋಟೋ ಜೊತೆ 'ಮನುಷ್ಯನಲ್ಲಿ ಹಂದಿಯ ಹೃದಯ' ಎಂಬ ಪೋಸ್ಟರ್ ಹಾಕಿದ ಝೀ ನ್ಯೂಸ್ !

Update: 2022-01-13 15:39 GMT

ಮನುಷ್ಯನಲ್ಲಿ ಹಂದಿಯ ಹೃದಯ ಎಂಬ ಪೋಸ್ಟರ್ ಇದ್ದ ಟ್ವೀಟ್ ಒಂದಕ್ಕಾಗಿ ಝೀ ನ್ಯೂಸ್ ವ್ಯಾಪಕ ಗೇಲಿಗೆ ಒಳಗಾಗಿದೆ. ಬಳಿಕ ಈ ಟ್ವೀಟ್ ಅನ್ನು ಝೀ ನ್ಯೂಸ್ ಡಿಲೀಟ್ ಮಾಡಿಬಿಟ್ಟಿದೆ.

ಬುಧವಾರ ಝೀ ನ್ಯೂಸ್ ಸಂಪಾದಕ ಸುಧೀರ್ ಚೌಧರಿ ಅವರ ಪ್ರೈಮ್ ಟೈಮ್ ಕಾರ್ಯಕ್ರಮ ಡಿ ಎನ್ ಎ ಕುರಿತ ಪೋಸ್ಟರ್ ಒಂದನ್ನು ಝೀ ನ್ಯೂಸ್ ಟ್ವೀಟ್ ಮಾಡಿತ್ತು. ಪ್ರತಿ ಬಾರಿಯಂತೆ ಕಾರ್ಯಕ್ರಮದ ಶೀರ್ಷಿಕೆ ಹಾಗು ಸುಧೀರ್ ಚೌಧರಿ ಫೋಟೋ ಇರುವ ಪೋಸ್ಟರ್ ಅದು. ಈ ಟ್ವೀಟ್ ಅನ್ನು ಸ್ವತಃ ಸುಧೀರ್ ಕೂಡ ಶೇರ್ ಮಾಡಿಕೊಂಡಿದ್ದರು.  

ಆದರೆ ಈ ಬಾರಿ ಪೋಸ್ಟರ್ ನಲ್ಲಿರುವ ಶೀರ್ಷಿಕೆ " ಇನ್ಸಾನ್ ಮೇ ಸುವ್ವರ್ ಕಾ ದಿಲ್  ( ಮನುಷ್ಯನಲ್ಲಿ ಹಂದಿಯ ಹೃದಯ ) " ಜೊತೆ ಸುಧೀರ್ ಫೋಟೋ ಇದ್ದಿದ್ದು ವ್ಯಾಪಕ ತಮಾಷೆ ಹಾಗು ಗೇಲಿಗೆ ಕಾರಣವಾಗಿದೆ. ಜನರು ಬಗೆಬಗೆಯ ತಮಾಷೆ ಕಮೆಂಟ್ ಹಾಗು ಜೋಕ್ ಜೊತೆ ಈ ಪೋಸ್ಟರ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. 

ಸಾಲದ್ದಕ್ಕೆ ಪೋಸ್ಟರ್ ಅನ್ನು ಶೇರ್ ಮಾಡಿದ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಅವರು ಇದೇನು ನಿಜವೇ ಎಂದು ಕುಟುಕಿದರು.

ಅಮೇರಿಕಾದ ವ್ಯಕ್ತಿಯೊಬ್ಬ ಇತ್ತೀಚಿಗೆ ಅನುವಂಶೀಯವಾಗಿ ಮಾರ್ಪಡಿಸಲಾದ ಹಂದಿಯ ಹೃದಯ ಕಸಿ ಮಾಡಿಸಿಕೊಂಡ ವಿಶ್ವದ ಮೊದಲ ಮನುಷ್ಯ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಆ ಬಗ್ಗೆ ವಿಶೇಷ ಕಾರ್ಯಕ್ರಮ ಮಾಡಲು ಹೊರಟಿದ್ದರು ಸುಧೀರ್ ಚೌಧರಿ. ಆದರೆ ಶೀರ್ಷಿಕೆ ಮತ್ತು ಅವರ  ಫೋಟೋ ಜೊತೆ ಸೇರುವಾಗ ಜನರಿಗೆ ತಮಾಷೆಯಾಗಿ ಕಂಡಿದ್ದು ಅವರಿಗೆ ದುಬಾರಿಯಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News