×
Ad

ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್

Update: 2022-01-15 11:27 IST

ಲಕ್ನೊ: ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ತಮ್ಮ ಪಕ್ಷ ಆಝಾದ್ ಸಮಾಜ ಪಕ್ಷ ಹಾಗೂ  ಸಮಾಜವಾದಿ ಪಕ್ಷ (ಎಸ್‌ಪಿ) ನಡುವೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಶನಿವಾರ ತಳ್ಳಿಹಾಕಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚಂದ್ರಶೇಖರ್ ಆಝಾದ್ ಅವರು 'ಬಹುಜನ ಸಮಾಜ'ವನ್ನು ಒಟ್ಟುಗೂಡಿಸಿದ್ದೆ ಹಾಗೂ ಆರು ತಿಂಗಳ ಕಾಲ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದೆ. ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಲು ಎರಡು ದಿನಗಳ ಕಾಲ ಲಕ್ನೋದಲ್ಲಿ ಇದ್ದೇನೆ' ಎಂದು ಆಝಾದ್ ಹೇಳಿದ್ದಾರೆ.

"ನಾನು ಅವರ ಮೇಲೆ [ಅಖಿಲೇಶ್ ಯಾದವ್] ಜವಾಬ್ದಾರಿಯನ್ನು ಬಿಟ್ಟಿದ್ದೇನೆ. ಅವರು ನನ್ನನ್ನು ಕರೆಯದೆ ನನ್ನನ್ನು ಅವಮಾನಿಸಿದ್ದಾರೆ" ಎಂದು ಚಂದ್ರಶೇಖರ್ ಆಝಾದ್ ಹೇಳಿದ್ದಾರೆ.

"ನಮ್ಮ ನಾಯಕರು ಸಮಾಜವಾದಿ ಪಕ್ಷಕ್ಕೆ ಸೇರುತ್ತಾರೆ ಎಂದು ನನ್ನ ಜನರು ಹೆದರುತ್ತಿದ್ದರು. ಅಖಿಲೇಶ್ ಜಿ ಅವರಿಗೆ ದಲಿತರ ಅಗತ್ಯವಿಲ್ಲ" ಎಂದು ಆಝಾದ್ ಹೇಳಿದರು.

ಅಖಿಲೇಶ್ ಯಾದವ್ ಅವರು ಸಾಮಾಜಿಕ ನ್ಯಾಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಮತ್ತು ದಲಿತರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮೌನವಾಗಿದ್ದಾರೆ ಎಂದು ಚಂದ್ರಶೇಖರ್ ಆಝಾದ್ ಆರೋಪಿಸಿದರು.

ಬಿಜೆಪಿಯನ್ನು ತಡೆಯುವ ಸಲುವಾಗಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಹಾಗೂ ಎಸ್‌ಪಿ ಜೊತೆ ಕೈಜೋಡಿಸಲು ಪ್ರಯತ್ನಿಸಿದೆ ಎಂದು ಚಂದ್ರಶೇಖರ್ ಆಝಾದ್ ಹೇಳಿದ್ದಾರೆ. ನಾನು ಅಖಿಲೇಶ್ ಯಾದವ್ ಅವರನ್ನು ನನ್ನ ಹಿರಿಯ ಸಹೋದರ ಎಂದು ಪರಿಗಣಿಸಿದ್ದೇನೆ ಎಂದು ಆಝಾದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News