ಪಂಜಾಬ್: ಕಾಂಗ್ರೆಸ್ ಜೊತೆಗಿನ 50 ವರ್ಷಗಳ ಒಡನಾಟವನ್ನು ಕೊನೆಗೊಳಿಸಿ ಎಎಪಿ ಸೇರಿದ ಜೋಗಿಂದರ್ ಮಾನ್

Update: 2022-01-15 06:54 GMT
Photo : Twitter/AAP

ಚಂಡಿಗಡ: ಪಂಜಾಬ್‌ ಕಾಂಗ್ರೆಸ್‌ಗೆ ಆಘಾತ ನೀಡಿರುವ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಜೋಗಿಂದರ್‌ ಮಾನ್‌ ಶನಿವಾರ ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಜೋಗಿಂದರ್ ಮಾನ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಒಂದು ದಿನದ ನಂತರ ಈ ನಿರ್ದಾರ ಕೈಗೊಂಡಿದ್ದಾರೆ.  ಆ ಮೂಲಕ ಪಂಜಾಬ್ ಅಸೆಂಬ್ಲಿ ಚುನಾವಣೆಗೆ ಕೆಲವೇ ವಾರಗಳ ಮುಂಚಿತವಾಗಿ ಕಾಂಗ್ರೆಸ್ ಪಕ್ಷದೊಂದಿಗಿನ 50 ವರ್ಷಗಳ ಹಳೆಯ ಸಂಬಂಧವನ್ನು ಕಡಿದುಕೊಂಡರು.

ಮಾನ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ, ಎಎಪಿ ನಾಯಕ ಹಾಗೂ  ಪಂಜಾಬ್ ಸಹ-ಪ್ರಭಾರಿ ರಾಘವ್ ಚಡ್ಡಾ ಅವರು ಹಿರಿಯ ರಾಜಕಾರಣಿಯ ಸೇರ್ಪಡೆಯು ರಾಜ್ಯದಲ್ಲಿ ಪಕ್ಷಕ್ಕೆ ದೊಡ್ಡ ಶಕ್ತಿಯನ್ನು ನೀಡುತ್ತದೆ ಎಂದು ಹೇಳಿದರು.

"ಅರವಿಂದ್ ಜಿ ಅವರ ದೂರದೃಷ್ಟಿಯಿಂದ ಪ್ರೇರಿತರಾಗಿ, ಪಂಜಾಬ್‌ನ ಮಾಜಿ ಕ್ಯಾಬಿನೆಟ್ ಮಂತ್ರಿ ಮತ್ತು ಮೂರು ಬಾರಿ ಶಾಸಕರಾಗಿರುವ  ಜೋಗಿಂದರ್ ಸಿಂಗ್ ಮಾನ್ ಜಿ ಅವರು ಕಾಂಗ್ರೆಸ್ ಜೊತೆಗಿನ 50 ವರ್ಷಗಳ ಹಳೆಯ ಒಡನಾಟವನ್ನು ಕೊನೆಗೊಳಿಸಿಕೊಂಡು ಎಎಪಿಗೆ ಸೇರಿದ್ದಾರೆ. ಅವರು ಪ್ರಸ್ತುತ ಪಂಜಾಬ್ ಆಗ್ರೋ ಇಂಡಸ್ಟ್ರೀಸ್ ಕಾರ್ಪೊರೇಷನ್‌ನ ಅಧ್ಯಕ್ಷರಾಗಿದ್ದರು ”ಎಂದು ರಾಘವ್ ಚಡ್ಡಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯದ ನಾಯಕರಾಗಿರುವ ಮಾನ್ ಅವರು ಬಹುಕೋಟಿ ಮೆಟ್ರಿಕ್ ನಂತರದ ಎಸ್‌ಸಿ ವಿದ್ಯಾರ್ಥಿವೇತನ ಹಗರಣದ ದುಷ್ಕರ್ಮಿಗಳ ವಿರುದ್ಧ ಪಂಜಾಬ್‌ನ ಕಾಂಗ್ರೆಸ್ ಸರಕಾರ ಯಾವುದೇ ಕ್ರಮ ಕೈಗೊಳ್ಳದಿದ್ದಕ್ಕಾಗಿ ಕೋಪಗೊಂಡಿದ್ದರು.

ತಮ್ಮ ಕ್ಷೇತ್ರವಾದ ಫಗ್ವಾರಾಕ್ಕೆ ಜಿಲ್ಲಾ ಸ್ಥಾನಮಾನ ನೀಡುವಂತೆ ಪದೇ ಪದೇ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿರುವ ಆಡಳಿತ ಪಕ್ಷದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News