×
Ad

"ಕಂಗನಾ ಕೆನ್ನೆಯ ರೀತಿ ನುಣುಪಾದ ರಸ್ತೆಗಳನ್ನು ನಿರ್ಮಿಸುತ್ತೇನೆ" ಎಂದು ಭರವಸೆ ನೀಡಿದ ಜಾರ್ಖಂಡ್‌ ಕಾಂಗ್ರೆಸ್‌ ಶಾಸಕ !

Update: 2022-01-15 20:19 IST
Photo: ANI

ರಾಂಚಿ: ಜಾರ್ಖಂಡ್‍ನ ತಮ್ಮ ವಿಧಾನಸಭಾ ಕ್ಷೇತ್ರವಾದ ಜಮ್ತಾರ ಇಲ್ಲಿನ ರಸ್ತೆಗಳನ್ನು ನಟಿ ಕಂಗನಾ ರಣೌತ್ ಅವರ ಕೆನ್ನೆಗಳಂತೆ ನುಣುಪಾಗಿಸುತ್ತೇನೆ ಎಂದು ಭರವಸೆ ನೀಡಿ ರಾಜ್ಯದ ಕಾಂಗ್ರೆಸ್ ಶಾಸಕ ಡಾ. ಇರ್ಫಾನ್ ಅನ್ಸಾರಿ  ವಿವಾದಕ್ಕೀಡಾಗಿದ್ದಾರೆ.

ಗುರುವಾರ ತಾವೇ ಪೋಸ್ಟ್ ಮಾಡಿದ ಒಂದು ವೀಡಿಯೋದಲ್ಲಿ ಅನ್ಸಾರಿ ಮೇಲಿನಂತೆ ಹೇಳಿದ್ದಾರೆ. "ಜಮ್ತಾರದಲ್ಲಿ 14 ವಿಶ್ವ ದರ್ಜೆಯ ರಸ್ತೆಗಳ ನಿರ್ಮಾಣ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ. ನಟಿ ಕಂಗನಾ ರಣೌತ್ ಅವರ ಕೆನ್ನೆಗಿಂತಲೂ ಈ ರಸ್ತೆಗಳು ನುಣುಪಾಗಿರುತ್ತವೆಯೆಂದು ನಾನು ನಿಮಗೆ ಭರವಸೆ ನೀಡುತ್ತೇನೆ" ಎಂದು ವೀಡಿಯೋದಲ್ಲಿ ಶಾಸಕ ಹೇಳಿದ್ದಾರೆ.

ಇತ್ತೀಚೆಗಷ್ಟೇ ಇನ್ನೊಂದು ಹೇಳಿಕೆ ನೀಡಿದ್ದ ಅನ್ಸಾರಿ, "ಹೆಚ್ಚು ಹೊತ್ತು ಮಾಸ್ಕ್ ಧರಿಸಬಾರದು, ಅದು ಆರೋಗ್ಯಕ್ಕೆ  ಹಾನಿಕರ" ಎಂದಿದ್ದರು. ತಾವು ಒಬ್ಬ ಎಂಬಿಬಿಎಸ್ ವೈದ್ಯ ಎಂದು ಹೇಳಿದ ಶಾಸಕ, ದೀರ್ಘಕಾಲ ಮಾಸ್ಕ್ ಬಳಕೆಯಿಂದ ಉಸಿರಾಡುವಾಗ ಇಂಗಾಲದ ಡಯಾಕ್ಸೈಡ್ ದೇಹ ಸೇರುತ್ತದೆ ಎಂದಿದ್ದರು.

ಕಳೆದ ತಿಂಗಳು ಹಿರಿಯ ಶಿವಸೇನೆ ನಾಯಕ ಮತ್ತು ಮಹಾರಾಷ್ಟ್ರ ಸಚಿವ ಗುಲಾಬ್‍ರಾವ್ ಪಾಟೀಲ್ ಮಾತನಾಡುತ್ತಾ ತಮ್ಮ ಕ್ಷೇತ್ರದ ರಸ್ತೆಗಳನ್ನು ನಟಿ ಹೇಮಾಮಾಲಿನಿಯ ಕೆನ್ನೆಗೆ ಹೋಲಿಸಿ ನಂತರ ಮಹಿಳಾ ಆಯೋಗದ ತರಾಟೆ ಹಿನ್ನೆಲೆಯಲ್ಲಿ ಕ್ಷಮೆಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News