ವೈಯಕ್ತಿಕವಾಗಿ ನನಗೆ ದುಃಖದ ದಿನ: ಟೆಸ್ಟ್ ನಾಯಕತ್ವ ತ್ಯಜಿಸಿದ ಕೊಹ್ಲಿ ಕುರಿತು ರವಿ ಶಾಸ್ತ್ರಿ ಪ್ರತಿಕ್ರಿಯೆ

Update: 2022-01-15 17:47 GMT

ಹೊಸದಿಲ್ಲಿ: ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಯುವ ವಿರಾಟ್ ಕೊಹ್ಲಿ ಅವರ ನಿರ್ಧಾರದ ಬಗ್ಗೆ ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಶನಿವಾರ ಪ್ರತಿಕ್ರಿಯಿಸಿದ್ದಾರೆ.  

ಭಾರತ ಕ್ರಿಕೆಟ್ ತಂಡದಲ್ಲಿ ಕೋಚ್ ಆಗಿದ್ದಾಗ ಕೊಹ್ಲಿಯೊಂದಿಗೆ ಇದ್ದ ಫೋಟೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಶಾಸ್ತ್ರಿ ಅವರು ಇಂದು ನನಗೆ 'ದುಃಖದ ದಿನ'ವಾಗಿದೆ ಎಂದು ಬರೆದಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಐಸಿಸಿ ಟ್ವೆಂಟಿ- 20 ವಿಶ್ವಕಪ್‌ನಲ್ಲಿ ಭಾರತದ ಅಭಿಯಾನದ ಕೊನೆಗೊಂಡ ನಂತರ ಶಾಸ್ತ್ರಿ ಅವರ ಮುಖ್ಯ ಕೋಚ್‌ನ ಅವಧಿಯು ಕೊನೆಗೊಂಡಿತು. ಕೊಹ್ಲಿ  40 ವಿಜಯಗಳೊಂದಿಗೆ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರಾಗಿ ತಂಡವನ್ನು ತ್ಯಜಿಸಿದರು.  ಸೆಂಚುರಿಯನ್‌ನಲ್ಲಿ ಶುಕ್ರವಾರ ಕೊನೆಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯು ಅವರ ಕೊನೆಯ ಟೆಸ್ಟ್ ಪಂದ್ಯವಾಗಿದೆ.

"ವಿರಾಟ್, ನೀವು ತಲೆ ಎತ್ತಿಕೊಂಡು ಹೋಗಬಹುದು. ನಾಯಕನಾಗಿ ನೀವು ಸಾಧಿಸಿದ್ದನ್ನು ಕೆಲವರು ಮಾತ್ರ ಸಾಧಿಸಿದ್ದಾರೆ. ಖಂಡಿತವಾಗಿ ಭಾರತ ಅತ್ಯಂತ ಆಕ್ರಮಣಕಾರಿ ಹಾಗೂ  ಯಶಸ್ವಿಯಾಗಿದೆ.  ವೈಯಕ್ತಿಕವಾಗಿ ನನಗೆ ದುಃಖದ ದಿನವಾಗಿದೆ. ಏಕೆಂದರೆ ಇದು ನಾವು ಒಟ್ಟಾಗಿ ನಿರ್ಮಿಸಿದ ತಂಡವಾಗಿದೆ'' ಎಂದು  ಶಾಸ್ತ್ರಿ ಅವರು ಟ್ವಿಟರ್ ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News