ಫೆಸಿಫಿಕ್‌ ಆಳ ಸಾಗರದಲ್ಲಿ ಜ್ವಾಲಾಮುಖಿ ಸ್ಪೋಟ: ಪಶ್ಚಿಮ ಅಮೆರಿಕಾ ತೀರಾದಲ್ಲಿ ಸುನಾಮಿ ಎಚ್ಚರಿಕೆ

Update: 2022-01-15 18:11 GMT

Photo: Twitter/@BNONews
 

ವೆಲ್ಲಿಂಗ್ಟನ್: ಫೆಸಿಫಿಕ್‌ ಸಾಗರದ ಆಳದಲ್ಲಿ ಉಂಟಾದ ಜ್ವಾಲಾಮುಖಿ ಟೊಂಗಾ ಕರಾವಳಿಯಲ್ಲಿ ಸುನಾಮಿಯನ್ನು ಸೃಷ್ಟಿಸಿದೆ. ಅಮೆರಿಕಾದ ಪಶ್ಚಿಮ ತೀರಗಳಲ್ಲೂ ಸುನಾಮಿ ಅಪ್ಪಳಿಸಬಹುದೆಂದು ಎಚ್ಚರಿಕೆ ನೀಡಲಾಗಿದೆ. 

ಯುಎಸ್‌ ರಾಷ್ಟ್ರೀಯ ಹವಾಮಾನ ಸೇವೆಯು ಸುನಾಮಿ ಸೂಚನೆಯನ್ನು ನೀಡಿದ್ದು, ಪಶ್ಚಿಮ ಕರಾವಳಿಯ ದ್ವೀಪಗಳಲ್ಲಿ  ಎತ್ತರದ ಬಲವಾದ ಅಲೆಗಳು ಬರಬಹುದು ಎಂದು ಎಚ್ಚರಿಸಿದೆ. 

ಅಮೆರಿಕಾ ಸುನಾಮಿ ನಿಗಾ ತಂಡವು ಸುನಾಮಿಯನ್ನು ಪರಿಶೀಲಿಸುತ್ತಿದ್ದು, ಬೀಚು ಹಾಗೂ ಬಂದರುಗಳನ್ನು ತೊರೆಯುವಂತೆ ಅಲ್ಲಿನ ನಾಗರಿಕರಿಗೆ ಎಚ್ಚರಿಸಲಾಗಿದೆ. 

ಸ್ಥಳೀಯ ಕಾಲಮಾನ ಮುಂಜಾನೆ 4.10 ರ ವೇಳೆ ಹಂಗಾ ಟೊಂಗಾ- ಹಂಗಾ ಹಾಪೈಯಲ್ಲಿ ಕಡಲಿನಾಳದಲ್ಲಿ ಅಗ್ನಿಪರ್ವತ ಸ್ಫೋಟಿಸಿದೆ. ಟೊಂಗಾ ರಾಜಧಾನಿ ನಕುಅಲೊಫಾದಿಂದ 65 ಕಿಮೀ ದೂರದಲ್ಲಿ ಇರುವ ಅಗ್ನಿಪರ್ವತ ಸ್ಪೋಟಿಸಿದ ಪರಿಣಾಮ 1.2 ಮೀಟರ್ ಎತ್ತರದ ಸುನಾಮಿ ಅಪ್ಪಲಿಸಿದೆ ಎಂದು ಆಸ್ಟ್ರೇಲಿಯಾದ ಹವಾಮಾನ ಕೇಂದ್ರ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News