ಕಾನೂನು ಹೋರಾಟದಲ್ಲಿ ಜೊಕೊವಿಕ್ ಗೆ ಸೋಲು, ಆಸ್ಟ್ರೇಲಿಯದಿಂದ ಗಡಿಪಾರು ಸಾಧ್ಯತೆ:ವರದಿ

Update: 2022-01-16 07:27 GMT

ಹೊಸದಿಲ್ಲಿ: ಸರ್ಬಿಯದ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯಾ ಗಡಿಪಾರು ವಿರುದ್ಧ ಸಲ್ಲಿಸಿರುವ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿದ್ದು, ಕಾನೂನು ಹೋರಾಟದಲ್ಲಿ ಟೆನಿಸ್ ಆಟಗಾರ ಸೋಲು ಕಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್ ಪಿ ವರದಿ ಮಾಡಿದೆ.

ನೊವಾಕ್ ಜೊಕೊವಿಕ್ ಆಸ್ಟ್ರೇಲಿಯಾದಿಂದ ತಾನು ಗಡಿಪಾರು ಆಗುವುದರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಸೋಲು ಕಂಡರು. ಫೆಡರಲ್ ನ್ಯಾಯಾಲಯವು ಜೊಕೊವಿಕ್ ಗೆ ಆಸ್ಟ್ರೇಲಿಯದಲ್ಲಿ ಉಳಿಯಲು ಹಾಗೂ  ಅವರ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಉಳಿಸಿಕೊಳ್ಳಲು ಟೂರ್ನಿಯಲ್ಲಿ ಭಾಗವಹಿಸಲು ಅನುವು ಮಾಡಿಕೊಡಬೇಕೆಂಬ ಮನವಿಯನ್ನು ಸರ್ವಾನುಮತದಿಂದ ತಿರಸ್ಕರಿಸಿತು.

ಕೋವಿಡ್ ವಿರುದ್ಧ ಲಸಿಕೆ ಪಡೆಯದೆ ಆಸ್ಟ್ರೇಲಿಯಕ್ಕೆ ಬಂದಿರುವ ಜೊಕೊವಿಕ್ ಅವರ ವೀಸಾವನ್ನು ಆಸ್ಟ್ರೇಲಿಯ ಸರಕಾರವು ಎರಡು ಬಾರಿ ರದ್ದುಪಡಿಸಿದ್ದು, ಅವರನ್ನು ಬಂಧಿಸಲಾಗಿದೆ. ಇದೀಗ ಅವರು ಗಡಿಪಾರಾಗುವ ಸಾಧ್ಯತೆ ಇದೆ.

ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿರುವ ಜೊಕೊವಿಕ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ವರ್ಷದ ಮೊದಲ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಭಾಗವಹಿಸಲು ಬಯಸಿದ್ದಾರೆ. ಆದರೆ ಕಡ್ಡಾಯ ಕೊರೋನ ಲಸಿಕೆ ಕುರಿತ ಆಸ್ಟ್ರೇಲಿಯ ಸರಕಾರದ ಕಠಿಣ ನಿಲುವು ಜೊಕೊವಿಕ್ ಗೆ ಮುಳುವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News