ಗಂಜಿಮಠ ಗ್ರಾಪಂ ಸದಸ್ಯ ಝಾಕಿರ್ ಸೂರಲ್ಪಾಡಿ ನಿಧನ

Update: 2022-01-16 11:53 GMT

ಮಂಗಳೂರು, ಜ.16: ಗಂಜಿಮಠ ಗ್ರಾಪಂ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ, ಕಾಂಗ್ರೆಸ್ ಯುವ ಮುಖಂಡ ಆರ್.ಎಸ್.ಝಾಕಿರ್ (42) ರವಿವಾರ ಬೆಳಗ್ಗೆ ಅಲ್ಪಕಾಲದ ಅಸೌಖ್ಯದಿಂದ ಗಂಜಿಮಠ ಸೂರಲ್ಪಾಡಿಯ ತನ್ನ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಗುರುಪುರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷರಾಗಿದ್ದ ಝಾಕಿರ್ ಗಂಜಿಮಠ ಗ್ರಾಪಂ ಸದಸ್ಯರಾಗಿ ನಾಲ್ಕು ಬಾರಿ ಆಯ್ಕೆಯಾಗಿದ್ದರು. ಮೂರನೇ ಅವಧಿಯಲ್ಲಿ ಗ್ರಾಪಂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಜನಾನುರಾಗಿಯಾಗಿದ್ದ ಝಾಕಿರ್ ಕಳೆದ ಗ್ರಾಪಂ ಚುನಾವಣೆಯಲ್ಲಿ ಜಿಲ್ಲೆಯಲ್ಲೇ ದಾಖಲೆ ಸಂಖ್ಯೆ ಮತ (1020) ಗಳಿಸಿದ್ದ ಹೆಗ್ಗಳಿಕೆ ಪಡೆದಿದ್ದರು.

ದ.ಕ. ಜಿಲ್ಲಾ ಕಾಂಗ್ರೆಸ್ ಸಂತಾಪ

ಝಾಕಿರ್ ಸೂರಲ್ಪಾಡಿ ಅವರ ನಿಧನಕ್ಕೆ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ಕ.ಅಭಯಚಂದ್ರ ಜೈನ್, ಶಾಸಕರಾದ ಯು.ಟಿ.ಖಾದರ್, ಮಂಜುನಾಥ ಭಂಡಾರಿ, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಮಾಜಿ ಶಾಸಕರಾದ ವಿಜಯ್ ಕುಮಾರ್ ಶೆಟ್ಟಿ, ಮೊಯ್ದಿನ್ ಬಾವಾ, ಐವನ್ ಡಿಸೋಜ, ಶಕುಂತಳಾ ಶೆಟ್ಟಿ, ವಸಂತ ಬಂಗೇರ, ಜೆ.ಆರ್.ಲೋಬೊ, ಪಕ್ಷದ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಪಿ.ವಿ. ಮೋಹನ್, ಸುರೇಶ್ ಬಳ್ಳಾಲ್, ಡಾ.ರಘು, ಶಶಿಧರ್ ಹೆಗ್ಡೆ, ಕಣಚೂರು ಮೋನು, ಜಿ.ಎ.ಬಾವಾ, ಪ್ರಸಾದ್‌ರಾಜ್ ಕಾಂಚನ್, ಮಿಥುನ್ ರೈ, ಹಿನಾಯತ್ ಅಲಿ ಮುಲ್ಕಿ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಶಾಹುಲ್ ಹಮೀದ್, ಮುಹಮ್ಮದ್ ಮೋನು, ಆರ್.ಕೆ.ಪೃಥ್ವಿರಾಜ್, ಲುಕ್ಮಾನ್ ಬಂಟ್ವಾಳ, ಶಾಲೆಟ್ ಪಿಂಟೊ, ಅಬ್ದುರ್ರವೂಫ್, ಬಿ.ಎಚ್.ಖಾದರ್, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಶಟ್ಟಿ, ಮಾಯಿಲಪ್ಪ ಸಾಲ್ಯಾನ್, ಶಾಹುಲ್ ಹಮೀದ್ ಬಜ್ಪೆ, ಯು.ಪಿ.ಇಬ್ರಾಹೀಂ, ಭಾಸ್ಕರ್ ಕೆ, ಪದ್ಮಶೇಖರ್ ಜೈನ್, ಪದ್ಮಪ್ರಸಾದ್ ಜೈನ್, ಡಾ.ಶೇಖರ್ ಪೂಜಾರಿ, ಲಾರೆನ್ಸ್ ಡಿಸೋಜ, ಧನಂಜಯ ಮಟ್ಟು, ಮೆಲ್ವಿನ್ ಡಿಸೋಜ, ಮುಹಮ್ಮದ್ ಕುಂಜತ್ತಬೈಲ್, ಶಬ್ಬೀರ್.ಎಸ್, ನಝೀರ್ ಬಜಾಲ್, ಪ್ರಕಾಶ್ ಶೆಟ್ಟಿ ತುಂಬೆ, ಚಂದ್ರಹಾಸ ಕರ್ಕೇರ, ವಿವೇಕ್‌ರಾಜ್ ಪೂಜಾರಿ, ಏರ್‌ಪೋರ್ಟ್ ಖಾದರ್, ನೀರಜ್ ಚಂದ್ರಪಾಲ್, ಆರಿಫ್ ಬಂದರ್ ಸಂತಾಪ ಸೂಚಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News