ಜನವರಿಯಿಂದ ದಿಲ್ಲಿ ಪೊಲೀಸ್ ನ 2,500 ಸಿಬ್ಬಂದಿಗೆ ಕೋವಿಡ್ ಸೋಂಕು

Update: 2022-01-17 19:03 GMT

ಹೊಸದಿಲ್ಲಿ: ಜನವರಿ 1ರಿಂದ ದಿಲ್ಲಿ ಪೊಲೀಸ್ನ ಸುಮಾರು 2,500 ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿದೆ. ಅವರಲ್ಲಿ 767 ಸಿಬ್ಬಂದಿ ಗುಣಮುಖರಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ದತ್ತಾಂಶದ ಪ್ರಕಾರ ಜನವರಿ 1ರಿಂದ ದಿಲ್ಲಿ ಪೊಲೀಸ್ ಇಲಾಖೆಯ ಎಲ್ಲ ಶ್ರೇಣಿ ಹಾಗೂ ಘಟಕಗಳ ಒಟ್ಟು ಸುಮಾರು 2,500 ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿದೆ.

ದಿಲ್ಲಿ ಪೊಲೀಸ್ನ ವಕ್ತಾರರು ಕೂಡ ಆಗಿರುವ ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಚಿನ್ಮೋಯಿ ಬಿಸ್ವಾಲ್ ಅವರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಆದರೆ, ಅವರು ಗುಣಮುಖರಾಗಿದ್ದು, ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

‘‘ಹೆಚ್ಚಿನವರು ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಜನವರಿ 1ರಿಂದ ಇಂದಿನ ವರೆಗೆ ಸುಮಾರು 2,500 ಸಿಬ್ಬಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಇವರಲ್ಲಿ 767 ಸಿಬ್ಬಂದಿ ಗುಣಮುಖರಾಗಿದ್ದಾರೆ ಹಾಗೂ ಕರ್ತವ್ಯಕ್ಕೆ ಹಾಜರಾಗಿದ್ದಾರೆೆ’’ ಎಂದು ದಿಲ್ಲಿ ಪೊಲೀಸ್ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಸ್ವಾಲ್ ತಿಳಿಸಿದ್ದಾರೆ.

ಈ ನಡುವೆ, ಅರ್ಹರಾದ ಎಲ್ಲ ರ್ಯಾಂಕ್ನ ಪೊಲೀಸ್ ಸಿಬ್ಬಂದಿಗೆ ಬೂಸ್ಟರ್ ಡೋಸ್ ನೀಡಲು ವಿಶೇಷ ಕ್ಯಾಂಪ್ ಆಯೋಜಿಸಲಾಗಿದೆ. ದಿಲ್ಲಿ ಪೊಲೀಸ್ನಲ್ಲಿ ಒಟ್ಟು 80 ಸಾವಿರ ಸಿಬ್ಬಂದಿ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News