12ರಿಂದ 14ರ ವರೆಗಿನ ಪ್ರಾಯ ಗುಂಪಿನ ಮಕ್ಕಳಿಗೆ ಮಾರ್ಚ್ ನಿಂದ ಕೋವಿಡ್ ಲಸಿಕೆ ಆರಂಭ ಸಾಧ್ಯತೆ

Update: 2022-01-17 19:10 GMT

ಹೊಸದಿಲ್ಲಿ: 12ರಿಂದ 14ರ ವರೆಗಿನ ಪ್ರಾಯ ಗುಂಪಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಫೆಬ್ರವರಿ ಅಂತ್ಯದಿಂದ ಆರಂಭಿಸಲು ಎಲ್ಲ ಸಿದ್ಧತೆ ಮಾಡಲಾಗಿದೆ ಎಂದು ರೋಗ ನಿರೋಧಕತೆಯ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್ಟಿಎಜಿಐ)ವಿನ ಕೋವಿಡ್ ಕಾರ್ಯಕಾರಿ ಗುಂಪಿನ ಅಧ್ಯಕ್ಷ ಡಾ. ಎನ್.ಕೆ. ಅರೋರಾ ಅವರು ತಿಳಿಸಿದ್ದಾರೆ.

15ರಿಂದ 18ರ ವರೆಗಿನ ಪ್ರಾಯ ಗುಂಪಿನ 3.31 ಕೋಟಿ ಮಕ್ಕಳು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
 ಜನವರಿ ಅಂತ್ಯದ ಒಳಗೆ 15ರಿಂದ 18 ವಯಸ್ಸಿನ ವರೆಗಿನ 7.4 ಕೋಟಿ ಹದಿಹರೆಯದವರಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡುವ ಗುರಿಯನ್ನು ನಾವು ಹೊಂದಿದ್ದೇವೆ. ಆದುದರಿಂದ ಫೆಬ್ರವರಿ ಆರಂಭದಲ್ಲಿ ನಾವು ಎರಡನೇ ಡೋಸ್ ಲಸಿಕೆ ಆರಂಭಿಸಬಹುದು ಹಾಗೂ ಫೆಬ್ರವರಿ ಅಂತ್ಯದ ವೇಳೆಗೆ ಎರಡನೇ ಡೋಸ್ ಅನ್ನು ಪೂರ್ಣಗೊಳಿಸಬಹುದು ಎಂದು ಅವರು ಹೇಳಿದ್ದಾರೆ.

ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಆರಂಭದಿಂದ 12ರಿಂದ 14 ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ಹಾಕುವುದನ್ನು ಆರಂಭಿಸಲು ನಾವು ಬಯಸುತ್ತೇವೆ ಎಂದು ಡಾ. ಅರೋರಾ ತಿಳಿಸಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News