"ಟೆಲಿ ಪ್ರಾಂಪ್ಟರ್‌ ಗೂ ಇಷ್ಟೊಂದು ಸುಳ್ಳುಗಳನ್ನು ಸ್ವೀಕರಿಸಲಾಗಲಿಲ್ಲ": ಪ್ರಧಾನಿ ಮೋದಿ ಬಗ್ಗೆ ರಾಹುಲ್‌ ವ್ಯಂಗ್ಯ

Update: 2022-01-18 06:36 GMT

ಹೊಸದಿಲ್ಲಿ: ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ವೇಳೆ ಟೆಲಿಪ್ರಾಂಪ್ಟರ್ ಅಸಮರ್ಪಕ ಕಾರ್ಯನಿರ್ವಹಣೆಯ ಕಾರಣದಿಂದ ಮುಜುಗರಕ್ಕೀಡಾಗಿದ್ದು ಸದ್ಯ ಸಾಮಾಜಿಕ ತಾಣದಾದ್ಯಂತ ಟ್ರೆಂಡಿಂಗ್‌ ಆಗಿದೆ. ಇದೀಗ ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ""ಟೆಲಿ ಪ್ರಾಂಪ್ಟರ್‌ ಗೂ ಇಷ್ಟೊಂದು ಸುಳ್ಳುಗಳನ್ನು ಸ್ವೀಕರಿಸಲಾಗಲಿಲ್ಲ" ಎಂದು ಪ್ರಧಾನಿ ಮೋದಿ ಕುರಿತು ವ್ಯಂಗ್ಯವಾಡಿದ್ದಾರೆ.

ಈ ನಡುವೆ ಟ್ವಿಟರ್‌ ನಲ್ಲಿ ಈ ಹಿಂದೆ ಪ್ರಧಾನಿ ಮೋದಿ ಟೆಲಿ ಪ್ರಾಂಪ್ಟರ್‌ ಬಳಸುವ ಕುರಿತು ರಾಹುಲ್‌ ಗಾಂಧಿ ನೀಡಿದ್ದ ಹೇಳಿಕೆಯ ವೀಡಿಯೋ ಕೂಡಾ ವೈರಲ್‌ ಆಗಿದೆ. ಈ ಹಿಂದೆ ಈ ಕುರಿತು ರಾಹುಲ್‌ ಗಾಂಧಿ ಹೇಳಿದ್ದಾರೆಂದು ಈ ಎರಡೂ ಕ್ಲಿಪ್‌ ಗಳನ್ನು ನೆಟ್ಟಿಗರು ಸಾಮಾಜಿಕ ತಾಣದಲ್ಲಿ ಶೇರ್‌ ಮಾಡುತ್ತಿದ್ದಾರೆ. 

ಟೆಲಿಪ್ರಾಂಪ್ಟರ್‌ ಎಂದರೇನು?

ಸಾಮಾನ್ಯವಾಗಿ ಮಾಧ್ಯಮಗಳಲ್ಲಿ ಅಥವಾ ಕೆಲ ಗಣ್ಯ ವ್ಯಕ್ತಿಗಳು ತಮಗೆಂದು ಮೊದಲೇ ಸಿದ್ಧಪಡಿಸಿಟ್ಟ ಭಾಷಣವನ್ನು ಟೆಲಿಪ್ರಾಂಪ್ಟರ್‌ ಮೂಲಕ ನೋಡಿ ಓದುತ್ತಾರೆ. ವೀಕ್ಷಕರಿಗೆ ಅವರು ನಮ್ಮನ್ನುದ್ದೇಶಿಸಿ ಅಥವಾ ಕ್ಯಾಮರಾ ನೋಡಿ ಮಾತನಾಡುತ್ತಿದ್ದಾರೆ ಎಂದೆನಿಸಿದರೂ ಅವರ ಮತ್ತು ಕ್ಯಾಮರಾದ ನಡುವೆ ಈ ಟೆಲಿಪ್ರಾಂಪ್ಟರ್‌ ಇರುತ್ತದೆ. ಇದರಲ್ಲಿ ಪದಗಳು ಮೂಡಿದಂತೆ ಎದುರಿದ್ದವರು ಓದಿಕೊಂಡು ಹೋಗುತ್ತಾರೆ.

Photo: Youtube

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News