ರಕ್ತದಾನದಿಂದ ಇಬ್ಬರಿಗೂ ಪ್ರಯೋಜನ: ಡಾ.ಫಹೀಮ್ ಅಬ್ದುಲ್ಲಾ

Update: 2022-01-18 13:56 GMT

ಉಡುಪಿ, ಜ.18: ರಕ್ತದಾನ ಮಾಡುವುದರಿಂದ ರಕ್ತ ಪಡೆದುಕೊಂಡವರಿಗೆ ಮತ್ತು ದಾನಿಗೂ ಬಹಳಷ್ಟು ಲಾಭ ಆಗುತ್ತದೆ. ರಕ್ತ ಪಡೆದುಕೊಂಡವರ ಜೀವ ಉಳಿದರೆ, ದಾನಿಯ ರಕ್ತ ಪರೀಕ್ಷೆ ಮಾಡಿದಂತಾಗುತ್ತದೆ ಮತ್ತು ಹೃದಯ ಸಂಬಂಧ ಕಾಯಿಲೆ ದೂರ, ಹೊಸ ರಕ್ತ ಉತ್ಪತ್ತಿ, ಹೊಸತನ ಹಾಗೂ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಹೂಡೆಯ ವೈದ್ಯ ಡಾ.ಫಹೀಮ್ ಅಬ್ದುಲ್ಲಾ ಹೇಳಿದ್ದಾರೆ.

ಉಡುಪಿ ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ್ ಮತ್ತು ಮಣಿಪಾಲ ಕೆಎಂಸಿ ಬ್ಲಡ್‌ಬ್ಯಾಂಕ್ ಸಹಯೋಗ ದೊಂದಿಗೆ ಉಡುಪಿ ಜಾಮೀಯ ಮಸೀದಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡುತಿದ್ದರು.

ಮುಖ್ಯ ಅತಿಥಿಯಾಗಿ ಮಣಿಪಾಲ ಕೆಎಂಸಿ ಬ್ಲಡ್‌ಬ್ಯಾಂಕಿನ ವಿನು ರಾಜೇಂದ್ರನ್ ಮಾತನಾಡಿ, ಪ್ರತಿ ಬಾರಿಯು ರಕ್ತದ ಕೊರತೆಯನ್ನು ಎದುರಿಸು ತ್ತೇವೆ. ಆದುದರಿಂದ ಯುವಜನತೆ ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗ ಬೇಕು. ಆಗ ಮಾತ್ರ ರಕ್ತದ ಅವಶ್ಯಕತೆ ಇರುವ ಇನ್ನೊಬ್ಬರ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಅಸೋಸಿಯೇಶನ್‌ನ ಅಧ್ಯಕ್ಷ ಅಬ್ದುಲ್ ಗಫೂರ್ ಕಲ್ಯಾಣ ಪುರ ವಹಿಸಿದ್ದರು. ಉಡುಪಿ ಪಿಎಫ್‌ಐ ಕಮ್ಯುನಿಟಿ ಡೆವಲಪ್‌ಮೆಟ್ ವಿಭಾಗದ ಶಮ್ಸ್ ತಬ್ರೇಜ್ ಉಪಸ್ಥಿತರಿದ್ದರು. ಸಂಸ್ಥೆಯ ಮಾಜಿ ಅಧ್ಯಕ್ಷ ವಿ.ಎಸ್.ಉಮರ್ ಸ್ವಾಗತಿಸಿದರು. ಸದಸ್ಯ ರಿಯಾಝ್ ಅಹ್ಮದ್ ವಂದಿಸಿದರು. ಇಕ್ಬಾಲ್ ಮನ್ನಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News