ಪೊಲೀಸ್ ಇಲಾಖೆಯಲ್ಲಿ ಉರ್ದು, ಫಾರ್ಸಿ ಬದಲಿಗೆ ಹಿಂದಿ ಬಳಕೆಗೆ ಮಧ್ಯಪ್ರದೇಶ ಸರಕಾರ ಚಾಲನೆ

Update: 2022-01-19 08:16 GMT

ಭೋಪಾಲ್: ರಾಜ್ಯ ಪೊಲೀಸರು ವಿವಿಧ ಪ್ರಕ್ರಿಯೆಗಳಲ್ಲಿ ಬಳಸುತ್ತಿರುವ ಉರ್ದು, ಫಾರ್ಸಿ (ಪರ್ಷಿಯನ್) ಮತ್ತು ಇತರ ಹಿಂದಿಯೇತರ ಪದಗಳ ಬದಲಿಗೆ ಹಿಂದಿ ಭಾಷೆ ಬಳಸುವ ಪ್ರಕ್ರಿಯೆಯನ್ನು ಮಧ್ಯಪ್ರದೇಶ ಸರಕಾರ ಆರಂಭಿಸಿದೆ.

ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಕಳೆದ ತಿಂಗಳು ಬಳಕೆಯಲ್ಲಿಲ್ಲದ ಇತರ ಭಾಷೆಯ ಪದಗಳನ್ನು ಹಿಂದಿ ಪದವಾಗಿ ಬದಲಾಯಿಸುವುದಾಗಿ ಘೋಷಿಸಿದ್ದರು.

ಅಧಿಕೃತ ಶಬ್ದಕೋಶದಲ್ಲಿ ಹಿಂದಿಯೇತರ ಪದಗಳನ್ನು ಬದಲಿಸುವ ಕುರಿತು ಏಳು ದಿನಗಳೊಳಗೆ ಸಲಹೆಗಳನ್ನು ಸಲ್ಲಿಸುವಂತೆ ವಿವಿಧ ಜಿಲ್ಲೆಗಳ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಧ್ಯಪ್ರದೇಶ ಪೊಲೀಸ್ ಪ್ರಧಾನ ಕಚೇರಿ ಮಂಗಳವಾರ ಪತ್ರ ಬರೆದಿದೆ.

ಈ ಪದಗಳನ್ನು ಭವಿಷ್ಯದಲ್ಲಿ ಪೊಲೀಸ್ ಪ್ರಕ್ರಿಯೆಗಳಲ್ಲಿ ಬಳಸಬಹುದಾದ ಹಿಂದಿ ಪದ ಕೋಶ ಅನ್ನು ಸಿದ್ಧಪಡಿಸಬೇಕು ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News