ಈ ಋತುವಿನ ನಂತರ ನಿವೃತ್ತಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ

Update: 2022-01-19 09:57 GMT
ಸಾನಿಯಾ ಮಿರ್ಝಾ (PTI)

ಹೊಸದಿಲ್ಲಿ: ಈ ಋತುವಿನ ನಂತರ ನಿವೃತ್ತಿಯಾಗುವ ಯೋಜನೆ ಹಾಕಿಕೊಂಡಿರುವೆ ಭಾರತದ  ಟೆನಿಸ್ ಪಟು ಸಾನಿಯಾ ಮಿರ್ಝಾ ಹೇಳಿದ್ದಾರೆ.

ಬುಧವಾರ ನಡೆದ  ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ಸಾನಿಯಾ ಹಾಗೂ  ಅವರ ಉಕ್ರೇನಿಯನ್ ಜೊತೆಗಾರ್ತಿ ನಾಡಿಯಾ ಕಿಚೆನೊಕ್ ಆರಂಭಿಕ ಸುತ್ತಿನಲ್ಲಿ ಸೋತಿದ್ದಾರೆ. ಈ ಸೋಲಿನ  ನಂತರ ಸಾನಿಯಾ ಈ ಘೋಷಣೆ ಮಾಡಿದರು.

‘’ಈ ಋತುವಿನ ಕೊನೆಯವರೆಗೂ ತಾನು ಆಡಲು ಬಯಸಿದ್ದೇನೆ. ಆದರೆ ಅದರಿಂದ ಆಚೆಗೆ ಆಡಲು  ಕಷ್ಟಕರವಾಗಿರುತ್ತದೆ’’ ಎಂದು ಇದುವರೆಗೆ ಆರು ಗ್ರ್ಯಾನ್  ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿರುವ ಡಬಲ್ಸ್ ವಿಭಾಗದ ಮಾಜಿ ನಂಬರ್ ಒನ್ ಆಟಗಾರ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News