ಜ.20ರಂದು ‘ಉಪನಿಷತ್ ದರ್ಶನ’ ಕೃತಿ ಬಿಡುಗಡೆ

Update: 2022-01-19 13:50 GMT

ಉಡುಪಿ, ಜ.19: ನಾಡಿನ ಖ್ಯಾತ ಪ್ರವಚನಕಾರ, ಶಿವಮೊಗ್ಗ ಜಿಲ್ಲೆ ಮತ್ತೂರಿನ ಶ್ರೀಅಕ್ಷರಾನಂದೇಂದ್ರ ಸರಸ್ವತಿ ಸ್ವಾಮೀಜಿ ಅವರ ಪ್ರವಚನವನ್ನಾ ಧರಿಸಿದ ‘ಉಪನಿಷತ್ ದರ್ಶನ’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ಜ.20ರಂದು ಅಂಬಲಪಾಡಿಯಲ್ಲಿ ನಡೆಯಲಿದೆ.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಉಡುಪಿ, ಚಿಂತನ ವೇದಿಕೆ ಅಂಬಲಪಾಡಿ, ಶ್ರೀಜನಾರ್ದನ ಮಹಾಕಾಳಿ ದೇವಸ್ಥಾನದ ಸಹಯೋಗ ದೊಂದಿಗೆ ಸಂಜೆ 4 ಗಂಟೆಗೆ ದೇವಸ್ಥಾನದ ಶ್ರೀಭವಾನಿ ಮಂಟಪದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪುಸ್ತಕವನ್ನು ಬಿಡುಗಡೆಗೊಳಿಸಲಾಗುವುದು ಎಂದು ಪುಸ್ತಕದ ಸಂಗ್ರಾಹಕ-ಲೇಖಕ, ನಿವೃತ್ತ ಶಿಕ್ಷಕ ಶಿಕಾರಿಪುರ ಈಶ್ವರ ಭಟ್ ತಿಳಿಸಿದ್ದಾರೆ.

ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ, ಖ್ಯಾತ ವೈದ್ಯ ಡಾ. ನಿ.ಬೀ ವಿಜಯ ಬಲ್ಲಾಳ ಅವರ ಉಪಸ್ಥಿತಿಯಲ್ಲಿ ಲೇಖಕ ಹಿರಿಯ ಪತ್ರಕರ್ತ ಬೆಂಗಳೂರಿನ ದು. ಗು. ಲಕ್ಷ್ಮಣ್ ಉಪನಿಷತ್ ದರ್ಶನ ಕೃತಿ ಬಿಡುಗಡೆ ಮಾಡಲಿದ್ದಾರೆ.ಅತಿಥಿಗಳಾಗಿ ಮಣಿಪಾಲ ಎಂಐಟಿ ಕಾಲೇಜಿನ ಪ್ರಾಧ್ಯಾಪಕ ಡಾ.ನಾರಾಯಣ ಶೆಣೈ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಉಡುಪಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಡಾ.ನಂದನ ಪ್ರಭು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಈಶ್ವರ ಭಟ್ ತಿಳಿಸಿದ್ದಾರೆ.

ಉಪನಿಷತ್ತುಗಳು ಭಾರತೀಯ ತತ್ವಶಾಸ್ತ್ರದ ಮೂಲ ಆಕರ ಗ್ರಂಥಗಳು. ಉಪನಿಷತ್ತು ಸಂಸ್ಕೃತ ಭಾಷೆಯಲ್ಲಿರುವುದರಿಂದ ಜನಸಾಮಾನ್ಯರು ಅವುಗಳನ್ನು ಓದಿ, ಅರ್ಥೈಸಿಕೊಳ್ಳುವುದು ಕಷ್ಟಕರವಾಗಿದೆ. ಆದ್ದರಿಂದ ಉಪನಿಷತ್ತುಗಳ ಸಾರಸರ್ವಸ್ವ ಮತ್ತು ಸಂದೇಶವನ್ನು ಸರಳವಾಗಿ ಕನ್ನಡದಲ್ಲಿ ಹೇಳುವ ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News