ರೆಡ್‌ಕ್ರಾಸ್ ಸಮಿತಿಯ ಮೇಲೆ ಸೈಬರ್‌ದಾಳಿ: 5 ಲಕ್ಷಕ್ಕೂ ಅಧಿಕ ಜನರ ಗೌಪ್ಯ ಮಾಹಿತಿಗೆ ಕನ್ನ

Update: 2022-01-20 17:30 GMT
ಸಾಂದರ್ಭಿಕ ಚಿತ್ರ:PTI

ಜಿನೆವಾ, ಜ.20: ಕಂಪ್ಯೂಟರ್ ಡೇಟಾ ಸಂಗ್ರಹಿಸುವ ಸರ್ವರ್ ಮೇಲೆ ಸೈಬರ್ ದಾಳಿ ನಡೆಸಿರುವ ವಂಚಕರು 5 ಲಕ್ಷಕ್ಕೂ ಅಧಿಕ ದುರ್ಬಲ ವರ್ಗದ ಜನರ ಗೌಪ್ಯ ಮಾಹಿತಿಗೆ ಕನ್ನ ಹಾಕಿದ್ದಾರೆ ಎಂದು ಅಂತರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿ(ಐಸಿಆರ್‌ಸಿ) ಹೇಳಿದೆ.

ಈ ವಾರ ನಡೆದಿರುವ ಸೈಬರ್ ದಾಳಿಯಿಂದ 5,15,000ಕ್ಕೂ ಅಧಿಕ ಮಂದಿಯ ಮೇಲೆ ಪರಿಣಾಮವಾಗಿದೆ. ಇದರಲ್ಲಿ ಕೌಟುಂಬಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕುಟುಂಬದಿಂದ ಪ್ರತ್ಯೇಕಗೊಂಡವರು, ವಲಸಿಗರು ಅಥವಾ ಪ್ರಾಕೃತಿಕ ವಿಪತ್ತಿನಿಂದ ನೆಲೆ ಕಳೆದುಕೊಂಡವರು, ಕಾಣೆಯಾದ ವ್ಯಕ್ತಿಗಳು ಮತ್ತು ಅವರ ಕುಟುಂಬದವರು, ಬಂಧನ ಕೇಂದ್ರದಲ್ಲಿರುವ ವ್ಯಕ್ತಿಗಳ ಸಹಿತ ದುರ್ಬಲ(ಅಸಹಾಯಕ) ವರ್ಗದವರು ಸೇರಿದ್ದಾರೆ . ವಿಶ್ವದಾದ್ಯಂತದ ಕನಿಷ್ಟ 60 ರೆಡ್‌ಕ್ರಾಸ್ ಘಟಕಗಳಿಂದ ಸಂಗ್ರಹಿಸಿದ ಮಾಹಿತಿ ಕಳವಾಗಿದೆ ಎಂದು ಐಸಿಆರ್‌ಸಿ ಮಾಹಿತಿ ನೀಡಿದೆ.

ಕಾಣೆಯಾದ ವ್ಯಕ್ತಿಗಳ ಮಾಹಿತಿ ಕಳವಾದರೆ ಅದು ಕುಟುಂಬದ ನೋವು ಮತ್ತು ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುತ್ತದೆ . ಈ ಮಾನವೀಯ ಮಾಹಿತಿಗೆ ಕನ್ನ ಹಾಕಿದವರು ಅದರ ದುರ್ಬಳಕೆ ಮಾಡಿಕೊಳ್ಳಬಹುದು ಎಂದು ಗೊಂದಲ ಮತ್ತು ಗಾಭರಿಗೆ ಒಳಗಾಗಿದ್ದೇವೆ ಎಂದು ಐಸಿಆರ್‌ಸಿಯ ಪ್ರಧಾನ ನಿರ್ದೇಶಕ ರಾಬರ್ಟ್ ಮಾರ್ಡಿನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News