×
Ad

ಜ. 21: ಯುನಿವೆಫ್ ವತಿಯಿಂದ ಕುರ್ ಆನ್ ಅಭಿಯಾನದ ಉದ್ಘಾಟನೆ

Update: 2022-01-20 23:10 IST

ಮಂಗಳೂರು : ಯುನಿವೆಫ್ ಕರ್ನಾಟಕ ಜನವರಿ 21ರಿಂದ ಫೆಬ್ರವರಿ 11ರ ತನಕ "ಓದಿರಿ ಸೃಷ್ಟಿಕರ್ತನ ಸಂದೇಶವನ್ನು" ಎಂಬ ಕೇಂದ್ರಿಯ ವಿಷಯದಲ್ಲಿ  ಹಮ್ಮಿಕೊಂಡಿರುವ ಕುರ್ ಆನ್ ಪ್ರಚಾರ ಅಭಿಯಾನದ ಉದ್ಘಾಟನಾ ಸಮಾರಂಭವು ಜನವರಿ 21 ರ ಸಂಜೆ 6.45 ಕ್ಕೆ ಕಂಕನಾಡಿ ಜಮೀಅತುಲ್ ಫಲಾಹ್ ಹಾಲ್ ನಲ್ಲಿ ಜರಗಲಿದೆ.

ಕುದ್ರೋಳಿ ಜಾಮಿಯಾ ಮಸೀದಿಯ ಇಮಾಮ್ ಮೌಲಾನಾ ಸಫೀಉಲ್ಲಾ ಸಿದ್ದೀಕಿ ನದ್ವಿ ಉದ್ಘಾಟನೆಯನ್ನು ನೆರವೇರಿಸಲಿರುವರು. ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅಧ್ಯಕ್ಷತೆ ವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News