ಶೇ. 63 ಆರೋಗ್ಯ ಕಾರ್ಯಕರ್ತರು, ಶೇ. 58 ಮುಂಚೂಣಿ ಕಾರ್ಯಕರ್ತರಿಂದ ಬೂಸ್ಟರ್ ಡೋಸ್ ಸ್ವೀಕಾರ: ಕೇಂದ್ರ

Update: 2022-01-20 18:38 GMT

ಹೊಸದಿಲ್ಲಿ, ಜ. 20: ಸುಮಾರು ಶೇ. 63 ಅರ್ಹ ಆರೋಗ್ಯ ಕಾರ್ಯಕರ್ತರು, ಶೇ. 58 ಮುಂಚೂಣಿ ಕಾರ್ಯಕರ್ತರು, ಶೇ. 39 ವಿವಿಧ ರೋಗಳಿಂದ ಬಳಲುತ್ತಿರುವ 60 ವರ್ಷಕ್ಕಿಂತ ಮೇಲ್ಪಟ್ಟವರು ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ಸ್ವೀಕರಿಸಿದ್ದಾರೆ ಎಂದು ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, 35 ಲಕ್ಷ ಆರೋಗ್ಯ ಕಾರ್ಯಕರ್ತರಲ್ಲಿ ಶೇ. 26.66 ಲಕ್ಷ ಆರೋಗ್ಯ ಕಾರ್ಯಕರ್ತರು ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ಸ್ವೀಕರಿಸಿದ್ದಾರೆ ಎಂದು ತಿಳಿಸಿದ್ದಾರೆ. ಬೂಸ್ಟರ್ ಡೋಸ್ ಪಡೆಯಲು ಬಾಕಿ ಇರುವ 33 ಲಕ್ಷ ಮುಂಚೂಣಿ ಕಾರ್ಯಕರ್ತರಿದ್ದಾರೆ.

ಅಲ್ಲದೆ, ಶೇ. 58 ಅಂದರೆ 1,91,400 ಮುಂಚೂಣಿ ಕಾರ್ಯಕರ್ತರು ಬೂಸ್ಟರ್ ಡೋಸ್ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ‘‘60 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಹಲವು ರೋಗಗಳು ಇರುವ ಅರ್ಹರ ಸಂಖ್ಯೆ 47,81,00 ಇದೆ. ಅವರಲ್ಲಿ 18,66,000 ಮಂದಿ ಮುನ್ನೆಚ್ಚರಿಕಾ ಡೋಸ್ ಪಡೆದುಕೊಂಡಿದ್ದಾರೆ. ಇದು ಶೇ. 39’’ ಎಂದು ಭೂಷಣ್ ಹೇಳಿದ್ದಾರೆ.

ಈಗ ಸುಮಾರು 1 ಕೋಟಿ ಜನರು (60 ವರ್ಷಕ್ಕಿಂತ ಮೇಲಿನವರು) ತಮ್ಮ ಮೊದಲ ಡೋಸ್ ಅನ್ನು ಇನ್ನಷ್ಟೇ ಪಡೆದುಕೊಳ್ಳಬೇಕಿದೆ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ. ಪೌಲ್ ಹೇಳಿದ್ದಾರೆ. ‘‘ಅಲ್ಲದೆ, ಶೇ. 25 ಜನರು ಇನ್ನಷ್ಟೇ ಎರಡನೇ ಡೋಸ್ ಪಡೆದುಕೊಳ್ಳಬೇಕಿದೆ. ಇದು ಅಪೂರ್ಣವಾದ ಕೆಲಸ. 15ರಿಂದ 18ರ ವರೆಗಿನ ಪ್ರಾಯ ಗುಂಪಿನ ಶೇ. 52 ಮಕ್ಕಳಿಗೆ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ. ಲಸಿಕೆ ತೆಗೆದುಕೊಳ್ಳಲು ಹೆಚ್ಚು ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರು ಮುಂದೆ ಬಂದಿದ್ದಾರೆ. ಲಸಿಕೆಯ ಲಭ್ಯತೆ ಎಂದಿಗೂ ಸಮಸ್ಯೆಯಾಗಿಲ್ಲ’’ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News