×
Ad

ಕಾಣೆಯಾದ ಅರುಣಾಚಲದ ಬಾಲಕನನ್ನು ಪತ್ತೆ ಹಚ್ಚಿದ ಚೀನಾ ಸೇನೆ, ಕರೆತರುವ ಪ್ರಕ್ರಿಯೆ ಆರಂಭ: ವರದಿ

Update: 2022-01-23 13:15 IST
ಮಿರಾಮ್ ತಾರೋನ್ (Photo: Twitter/@TapirGao)

ಹೊಸದಿಲ್ಲಿ: ಅರುಣಾಚಲ ಪ್ರದೇಶದ ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ನಾಪತ್ತೆಯಾಗಿದ್ದ 17 ವರ್ಷದ ಬಾಲಕನನ್ನು ಚೀನಾ ಸೇನೆ ಪತ್ತೆ ಮಾಡಿದ್ದು, ಬಾಲಕನನ್ನು ದೇಶಕ್ಕೆ ಕರೆತರಲು ಸೂಕ್ತ ವಿಧಾನವನ್ನು ಅನುಸರಿಸಲಾಗುತ್ತಿದೆ ಎಂದು ಭಾರತೀಯ ಸೇನೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

"ಅರುಣಾಚಲ ಪ್ರದೇಶದಿಂದ ಕಾಣೆಯಾಗಿರುವ ಬಾಲಕನನ್ನು ಪತ್ತೆಹಚ್ಚಲಾಗಿದೆ ಎಂದು ಚೀನಾದ ಸೇನೆಯು ನಮಗೆ ತಿಳಿಸಿದ್ದು, ಬಾಲಕನನ್ನು ಕರೆತರಲು ಸೂಕ್ತ ಕಾರ್ಯವಿಧಾನವನ್ನು ಅನುಸರಿಸಲಾಗುತ್ತಿದೆ" ಎಂದು ತೇಜ್ಪುರ್ ಪಿಆರ್ ಒ ಡಿಫೆನ್ಸ್ ಲೆಫ್ಟಿನೆಂಟ್ ಕರ್ನಲ್ ಹರ್ಷವರ್ಧನ್ ಪಾಂಡೆ ಅವರ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News