ಮೂರನೇ ಏಕದಿನ: ಭಾರತದ ಗೆಲುವಿಗೆ 288 ರನ್ ಗುರಿ ನೀಡಿದ ದಕ್ಷಿಣ ಆಫ್ರಿಕಾ

Update: 2022-01-23 12:50 GMT
ಕ್ವಿಂಟನ್ ಡಿಕಾಕ್ , Photo: AFP

ಕೇಪ್‌ಟೌನ್, ಜ.23: ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್ ಶತಕ ಹಾಗೂ ಮಧ್ಯಮ ಕ್ರಮಾಂಕದ ರಾಸ್ಸಿ ವಾನ್‌ಡರ್ ಡುಸ್ಸೆನ್ ಅರ್ಧಶತಕದ ಕೊಡುಗೆಯ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದ ಗೆಲುವಿಗೆ ಭಾರತಕ್ಕೆ 288 ರನ್ ಗುರಿ ನೀಡಿದೆ.

ರವಿವಾರ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿದ್ದ ದಕ್ಷಿಣ ಆಫ್ರಿಕಾ 49.5 ಓವರ್‌ಗಳಲ್ಲಿ 287 ರನ್‌ಗೆ ಸರ್ವಪತನಗೊಂಡಿತು. ದಕ್ಷಿಣ ಆಫ್ರಿಕಾವು 70 ರನ್‌ಗೆ 3 ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಆಗ ತಂಡಕ್ಕೆ ಆಸರೆಯಾದ ಡಿಕಾಕ್(124 ರನ್, 130 ಎಸೆತ, 12 ಬೌಂಡರಿ, 2 ಸಿಕ್ಸರ್)ಹಾಗೂ ಡುಸ್ಸೆನ್(52 ರನ್, 59 ಎಸೆತ, 4 ಬೌಂ.1 ಸಿ.) 4ನೇ ವಿಕೆಟ್ ಜೊತೆಯಾಟದಲ್ಲಿ 144 ರನ್ ಸೇರಿಸಿದರು.

ಡೇವಿಡ್ ಮಿಲ್ಲರ್(39 ರನ್, 38 ಎಸೆತ) ಹಾಗೂ ಡ್ವೇಯ್ನೆ ಪ್ರಿಟೋರಿಯಸ್(20 ರನ್, 25 ಎಸೆತ)7ನೇ ವಿಕೆಟ್ ಜೊತೆಯಾಟದಲ್ಲಿ 44 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಭಾರತದ ಬೌಲಿಂಗ್ ವಿಭಾಗದಲ್ಲಿ ಪ್ರಸಿದ್ಧ ಕೃಷ್ಣ(3-59)ಯಶಸ್ವಿ ಬೌಲರ್ ಎನಿಸಿಕೊಂಡರು. ದೀಪಕ್ ಚಹಾರ್(2-53), ಜಸ್‌ಪ್ರೀತ್ ಬುಮ್ರಾ (2-52)ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

ಭಾರತವು ಇಂದು ಆಡುವ 11ರ ಬಳಗದಲ್ಲಿ 4 ಬದಲಾವಣೆ ಮಾಡಿದ್ದು, ಸೂರ್ಯಕುಮಾರ್ ಯಾದವ್, ಜಯಂತ್ ಯಾದವ್, ದೀಪಕ್ ಚಹಾರ್‌ಹಾಗೂ ಪ್ರಸಿದ್ದ ಕೃಷ್ಣರನ್ನು ಸೇರಿಸಿಕೊಂಡಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News