×
Ad

ತಂಬಾಕು ಮಾರಾಟದ ಅಂಗಡಿಗಳಿಗೆ ದಾಳಿ: ದಂಡ ವಸೂಲಿ

Update: 2022-01-23 19:40 IST

ಉಡುಪಿ, ಜ.23: ಉಡುಪಿ ಜಿಲ್ಲೆಯಲ್ಲಿ ಕೋಟ್ಪಾ ಕಾಯಿದೆಯನ್ನು ಅನು ಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ತನಿಖಾ ದಳದ ವತಿಯಿಂದ ಉಡುಪಿ ನಗರ ವ್ಯಾಪ್ತಿ ಪ್ರದೇಶಗಳಲ್ಲಿ ತಂಬಾಕು ಮಾರಾಟದ ಅಂಗಡಿಗಳು, ಹೊಟೇಲ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ದಾಳಿ ನಡೆಸಿ ಪ್ರಕರಣ ದಾಖಲಿಸಿ 2450ರೂ. ದಂಡ ವಸೂಲಿ ಮಾಡಲಾಗಿದೆ.

ಅದೇ ರೀತಿ ಮಳಿಗೆಗಳಲ್ಲಿ ಇದ್ದ ಜಾಹೀರಾತು ಬೋರ್ಡ್‌ಗಳನ್ನು ತೆಗೆಸ ಲಾಯಿತು. ಸೆಕ್ಷನ್ 4,6(ಎ) ನಾಮಫಲಕಗಳನ್ನು ದಾಳಿಯ ವೇಳೆ ವಿತರಿಸ ಲಾಯಿತು. ದಾಳಿಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ, ಉಡುಪಿ ತಾಲೂಕು ಆರೋಗ್ಯಾಧಿಕಾರಿಯಾದ ಡಾ. ವಾಸುದೇವ್, ದೇವಪ್ಪ ಪಟಗಾರ್, ಉಡುಪಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಲಾ, ರಾಷ್ಟ್ರೀಯ ತಂಬಾಕು ನಿಯಂತ್ರಣಾ ಘಟಕದ ವತಿಯಿಂದ ಜಿಲ್ಲಾ ಸಾಮಾಜಿಕ ಕಾರ್ಯಕರ್ತರಾದ ಶೈಲಾ ಶಾಮನೂರು, ಉಡುಪಿ ಪೊಲೀಸ್ ಠಾಣಾ ಸಿಬ್ಬಂದಿ ಸಿದ್ಧಪ್ಪ ತಲವಾಯಿ ಮತ್ತು ಹನುಮಂತ ಪೂಜಾರಿ, ವಾಹನ ಚಾಲಕರಾದ ಬಾಲು ಹಾಗೂ ಸಂತೋಷ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News