×
Ad

ಉಡುಪಿ ಶಿರವಸ್ತ್ರ ಪ್ರಕರಣದ ನಡುವೆ ಆಸ್ಟ್ರೇಲಿಯಾ ಬಿಡುಗಡೆಮಾಡಿದ ಹಿಜಾಬ್‌ಧಾರಿ ವೈದ್ಯೆಯ ಚಿತ್ರವಿರುವ ಅಂಚೆಚೀಟಿ ವೈರಲ್

Update: 2022-01-24 19:22 IST

ಉಡುಪಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಶಿರವಸ್ತ್ರ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ತರಗತಿಗೆ ಬಹಿಷ್ಕರಿಸಿರುವ ಘಟನೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಈ ಕುರಿತು ಸಾಮಾಜಿಕ ತಾಣದಾದ್ಯಂತ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ. ಹಲವು ರಾಷ್ಟ್ರೀಯ ನಾಯಕರು, ಸೆಲೆಬ್ರಿಟಿಗಳು, ಹೋರಾಟಗಾರರು ಮುಸ್ಲಿಂ ವಿದ್ಯಾರ್ಥಿನಿಯರ ಸಂವಿಧಾನಬದ್ಧ ಹಕ್ಕುಗಳನ್ನು ಮೊಟಕುಗೊಳಿಸುವುದರ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ.

ಒಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿನಿಯರ ಪರ ವಿರೋಧ ಚರ್ಚೆ ನಡೆಯುತ್ತಿದ್ದಂತೆ, ಕಳೆದ ವರ್ಷ ಆಸ್ಟ್ರೇಲಿಯಾ ಸರ್ಕಾರ ಬಿಡುಗಡೆಗೊಳಿಸಿರುವ ಹಿಜಾಬ್‌ಧಾರಿ ಮಹಿಳೆಯ ಭಾವಚಿತ್ರವಿರುವ ಸ್ಟಾಂಪ್‌ ಈಗ ಮತ್ತೆ ವೈರಲ್‌ ಆಗುತ್ತಿದೆ. 

ಕೋವಿಡ್‌ ಫ್ರಂಟ್‌ಲೈನ್‌ ಕಾರ್ಯಕರ್ತರಿಗೆ ಗೌರವ ಸೂಚಿಸುವ ಸಲುವಾಗಿ ಈ ಸ್ಟಾಂಪ್‌ ಅನ್ನು ಬಿಡುಗಡೆಗೊಳಿಸಲಾಗಿತ್ತು. ಆಸ್ಟ್ರೇಲಿಯನ್‌ ಡಾಲರ್‌ 1.1 ಮುಖ ಬೆಲೆಯ ಈ ಸ್ಟಾಂಪಿನಲ್ಲಿ ಸ್ಕಾರ್ಫ್‌ ಧರಿಸಿದ ಮಹಿಳಾ ವೈದ್ಯರೊಬ್ಬರು ಮುಂಚೂಣಿಯಲ್ಲಿರುವುದು ಕಾಣಬಹುದು. 

ಈ ಬಗ್ಗೆ ಸಾಮಾಜಿಕ ತಾಣದಾದ್ಯಂತ ಅಭಿಪ್ರಾಯ ವ್ಯಕ್ತಪಡಿಸಿರುವ ನೆಟ್ಟಿಗರು, ಭಾರತದಲ್ಲಿ ಹಿಜಾಬ್‌ ಧರಿಸಿದ ಯುವತಿಯರನ್ನು ಶಾಲೆಯಿಂದ ಹೊರಹಾಕಿದರೆ ಆಸ್ಟ್ರೇಲಿಯಾ ಅವರ ಸೇವೆಯನ್ನು ಗುರುತಿಸಿ ಗೌರವಿಸುತ್ತಿದೆ" ಎಂದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News