ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಫೋಟೋ ವಿರುದ್ಧದ ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್‌ ಹೇಳಿದ್ದೇನು?

Update: 2022-01-25 08:59 GMT

ತಿರುವನಂತಪುರಂ: ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಕಾಣಿಸಲಾಗುವ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ತೆಗೆದುಹಾಕಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಇತ್ತೀಚೆಗೆ ಕೇರಳ ಹೈಕೋರ್ಟ್‍ನ ಏಕಸದಸ್ಯ ಪೀಠ ವಜಾಗೊಳಿಸಿದ್ದರೆ ಈ ಆದೇಶವನ್ನು ಪ್ರಶ್ನಿಸಿ ಆರ್‍ಟಿಐ ಕಾರ್ಯಕರ್ತರೊಬ್ಬರು ಸಲ್ಲಿಸಿದ್ದ ಅಪೀಲನ್ನು ಹೈಕೋರ್ಟಿನ ವಿಭಾಗೀಯ ಪೀಠ ಮಂಗಳವಾರ ತಳ್ಳಿ ಹಾಕಿದೆ.

ಲಸಿಕೆ ಪ್ರಮಾಣಪತ್ರದಲ್ಲಿರುವ ಪ್ರಧಾನಿ ಫೋಟೋ ಒಂದು ಜಾಹೀರಾತು ಅಲ್ಲ ಹಾಗೂ ಲಸಿಕೆ ಪ್ರಮಾಣಪತ್ರದ ಮೂಲಕ ಪ್ರಧಾನಿಗೆ ಸಂದೇಶ ನೀಡುವ ಹಕ್ಕಿದೆ ಎಂದು ಏಕಸದಸ್ಯ ಪೀಠ ಡಿಸೆಂಬರ್ 21ರಂದು ನೀಡಿದ ತನ್ನ ತೀರ್ಪಿಲ್ಲಿ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಒಪ್ಪಿದ ವಿಭಾಗೀಯ ಪೀಠ "ಅದು ಪ್ರಧಾನಿಯ ಸಂದೇಶ, ಜಾಹಿರಾತು ಅಲ್ಲ" ಎಂದು ಹೇಳಿದೆ. ವಿಸ್ತೃತ ತೀರ್ಪು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದೆ.

ಈ ಹಿಂದೆ ಪೀಟರ್ ಮೇಲ್ಪರಂಬಿಲ್ ಅವರು ದಾಖಲಿಸಿದ್ದ ಪಿಐಎಲ್ ಅನ್ನು ಡಿಸೆಂಬರ್ 21ರಂದು ರದ್ದುಗೊಳಿಸುವ ವೇಳೆ ನ್ಯಾಯಾಲಯ ಅರ್ಜಿದಾರನಿಗೆ ರೂ 1 ಲಕ್ಷ ದಂಡ ಕೂಡ ವಿಧಿಸಿತ್ತು. ಇಂದು ಇತ್ಯರ್ಥಗೊಂಡ ಪ್ರಕರಣದಲ್ಲಿಯೂ ದಂಡ ವಿಧಿಸಲಾಗುವುದೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News