ಒಬ್ಬ ಸಂತನಾಗಿರುವವ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ: ಆದಿತ್ಯನಾಥ್‌ ಕುರಿತು ಸ್ವಾಮಿ ಅವಿಮುಕ್ತೇಶ್ವರಾನಂದ

Update: 2022-01-25 11:41 GMT

ಪ್ರಯಾಗರಾಜ್:‌ "ಸಂವಿಧಾನಬದ್ಧವಾಗಿ ಜಾತ್ಯತೀತತೆಯ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಓರ್ವ ಸಂತನಾಗಿದ್ದವನು ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಅವರು ʼಧಾರ್ಮಿಕರಾಗಿ ಉಳಿಯಲೂ ಸಾಧ್ಯವಿಲ್ಲ" ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಉಲ್ಲೇಖಿಸಿ ಪ್ರಮುಖ ಹಿಂದೂ ದಾರ್ಶನಿಕರಾದ ಸ್ವಾಮಿ ಅವಿಮುಕ್ತೇಶ್ವರಾನಂದ ಸೋಮವಾರ ಹೇಳಿಕೆ ನೀಡಿದ್ದಾಗಿ deccanherald ವರದಿ ಮಾಡಿದೆ.

ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಮುಖ್ಯಮಂತ್ರಿ ಆದಿತ್ಯನಾಥ್ ಅವರ ರಾಜಕೀಯ ಸ್ಥಾನಮಾನ ಮತ್ತು ಗೋರಖ್‌ಪುರದ ಗೋರಖನಾಥ ದೇವಸ್ಥಾನದ ಸಂತ ಸ್ಥಾನಮಾನದ ಕುರಿತಾದ ಪ್ರಶ್ನೆಗೆ ತಮ್ಮ ಉತ್ತರದಲ್ಲಿ ಈ ಹೇಳಿಕೆ ನೀಡಿದ್ದಾರೆ.

“ಯಾವುದೇ ವ್ಯಕ್ತಿ ಎರಡು ಪ್ರತಿಜ್ಞೆಗಳನ್ನು ಪಾಲಿಸಲು ಸಾಧ್ಯವಿಲ್ಲ. ಒಬ್ಬ ಸಂತ ಮಹಾಂತನಾಗಬಹುದು ಆದರೆ ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿ ಅಲ್ಲ. ಇಸ್ಲಾಂ ಧರ್ಮದ 'ಖಿಲಾಫತ್' ವ್ಯವಸ್ಥೆಯಲ್ಲಿ ಇದು ಸಾಧ್ಯ, ಇದರಲ್ಲಿ ಧಾರ್ಮಿಕ ಮುಖ್ಯಸ್ಥನೂ ರಾಜನಾಗುತ್ತಾನೆ, ”ಎಂದು ಗಂಗಾ ದಡದಲ್ಲಿ ನಡೆದ ಮಾಘ ಜಾತ್ರೆಯಲ್ಲಿ ಭಾಗವಹಿಸಿದ ಅವರು ಹೇಳಿದರು.

“ಈ ವರ್ಷ ಮಾಘ ಜಾತ್ರೆಯನ್ನು ಬಹಳ ಕಡೆಗಣಿಸಲಾಗಿದೆ. ಕೆಲವು ಸಂತರು ಉಪವಾಸ ಮತ್ತು ಆತ್ಮಾಹುತಿಗೆ ಬೆದರಿಕೆ ಹಾಕುವ ಮಟ್ಟಕ್ಕೆ ಹೋಗಿದ್ದಾರೆ. ನಾಯಕರು ಚುನಾವಣೆಯಲ್ಲಿ ಬ್ಯುಸಿಯಾಗಿದ್ದರೆ, ಸರ್ಕಾರಿ ಅಧಿಕಾರಿಗಳು ಸರಿಯಾಗಿ ಜಾತ್ರೆಯನ್ನು ನಿರ್ವಹಿಸಬಹುದಲ್ಲವೇ?" ಎಂದು ಅವರು ಪ್ರಶ್ನಿಸಿದರು.

ಧರ್ಮದಲ್ಲಿ ರಾಜಕೀಯ ಹಸ್ತಕ್ಷೇಪದ ಕುರಿತು ಮಾತನಾಡಿದ ಅವರು ಎಲಲ್‌ ರಾಜಕೀಯ ಪಕ್ಷಗಳು ಧರ್ಮವನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದರು. ರಾಜಕೀಯ ಪಕ್ಷಗಳ ಪ್ರವೃತ್ತಿ ಸಂತರು ಮತ್ತು ಧಾರ್ಮಿಕ ಮುಖಂಡರೊಂದಿಗಿನ ಸಾಮಾನ್ಯ ಸಂಬಂಧಗಳಿಗೆ ಸೀಮಿತವಾಗಿಲ್ಲ. ಅವರು ತಮ್ಮ ಪಕ್ಷದ ಜನರನ್ನು ಧಾರ್ಮಿಕ ಸ್ಥಾನಗಳಿಗೆ ನೇಮಿಸುತ್ತಿದ್ದಾರೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News