ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾಗೆ ಪರಮ್ ವಿಶಿಷ್ಟ ಸೇವಾ ಪದಕ

Update: 2022-01-25 12:20 GMT

ಹೊಸದಿಲ್ಲಿ, ಜ.25: ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಭಾರತದ ಅತ್ಲೀಟ್ ನೀರಜ್ ಚೋಪ್ರಾಗೆ ಪರಮ್ ವಿಶಿಷ್ಟ ಸೇವಾ ಪದಕ ನೀಡಿ ಗೌರವಿಸಲಾಗುವುದು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ, 4 ರಜಪೂತ ರೈಫಲ್ಸ್‌ನ ಸುಬೇದಾರ್ ನೀರಜ್ ಚೋಪ್ರಾ ಗೆ ಗಣರಾಜ್ಯೋತ್ಸವ ದಿನದಂದು ಪರಮ್ ವಿಶಿಷ್ಟ ಸೇವಾ ಪದಕ ನೀಡಲಾಗುವುದು ಎಂದು ಸುದ್ದಿ ಸಂಸ್ಥೆ ಎಎನ್‌ಐ ಮಂಗಳವಾರ ಟ್ವೀಟಿಸಿದೆ.

ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಚಿನ್ನದ ಪದಕ ಜಯಿಸಿದ್ದರು. ಗೇಮ್ಸ್‌ನಲ್ಲಿ ಭಾರತ ವೈಯಕ್ತಿಕ ವಿಭಾಗದಲ್ಲಿ ಗೆದ್ದ ಎರಡನೇ ಪದಕವಾಗಿತ್ತು. 2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅಭಿನವ್ ಬಿಂದ್ರಾ ಶೂಟಿಂಗ್‌ನ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಜಯಿಸಿದ್ದರು.
ಕಳೆದ ವರ್ಷ ನೀರಜ್ ಚೋಪ್ರಾಗೆ ದೇಶದ ಅತ್ಯುನ್ನತ ಕ್ರೀಡಾ ಗೌರವ ಮೇಜರ್ ಧ್ಯಾನ್‌ಚಂದ್ ಖೇಲ್‌ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News