ಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ

Update: 2022-01-26 07:18 GMT

ಕುಂದಾಪುರ: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ 73ನೆ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಧ್ವಜಾರೋಹಣ ನೆರವೇರಿಸಿದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರಹ್ಮಾನ್ ಬ್ಯಾರಿ ಮಾತನಾಡಿ, ಭಾರತದ ಸಂವಿಧಾನ ವನ್ನು ಸರ್ವರೂ ಗೌರವಿಸಿ ಸಂವಿಧಾನದ ಉದ್ದೇಶವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕು ಎಂದು ಹೇಳಿದರು.

ಕುಂದಾಪುರ ಪುರಸಭಾ ಸದಸ್ಯೆ ಲಕ್ಷ್ಮಿ ಬಾಯಿ, ಬ್ಯಾರೀಸ್ ಆಂಗ್ಲ ಮಾಧ್ಯಮ ಶಾಲೆಯ ಸಲಹಾ ಮಂಡಳಿ ಸದಸ್ಯ ಹಾಜಿ ಅಬುಷೇಖ್ ಶುಭ ಹಾರೈಸಿದರು.

ಪುರಸಭಾ ಸದಸ್ಯೆ ಕಮಲ, ಕುಂದಾಪುರ ಪುರಸಭಾ ಮಾಜಿ ಉಪಾಧ್ಯಕ್ಷ ನಾಗರಾಜ್ ಕಾಂಚನ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಶಂಕರ ಪೂಜಾರಿ, ಪ್ರಕಾಶ್, ಹಿರಿಯರಾದ ಗೋಪಾಲ ಪೂಜಾರಿ ಕೋಡಿ, ಉರ್ದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಫೀಕ್, ಡಾ.ಆಸೀಫ್ ಬ್ಯಾರಿ, ಬ್ಯಾರೀಸ್ ಆಂಗ್ಲಮಾಧ್ಯಮ ಸಲಹಾ ಮಂಡಳಿ ಸದಸ್ಯೆ ಮುಸ್ತರೀನ್, ವಿವಿಧ ವಿಭಾಗಗಳ ಮುಖ್ಯಸ್ಥರಾದ ಸಿದ್ದಪ್ಪ ಕೆ.ಎಸ್., ಡಾ.ಶಮೀರ್, ಜಯಂತಿ, ಅಶ್ವಿನಿ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಇಲಿಯಾಸ್, ಸಮೀರ್ ಹಾಗೂ ವೀಣಾ ಅಗೇರ್ ಉಪಸ್ಥಿತರಿದ್ದರು.

ಕನ್ನಡ ಉಪನ್ಯಾಸಕ ಸಂದೀಪ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News