ಕಾಸರಗೋಡು : ಗಣರಾಜ್ಯೋತ್ಸವದಲ್ಲಿ ತಲೆ ಕೆಳಗಾಗಿಸಿ ಧ್ವಜಾರೋಹಣ!

Update: 2022-01-26 10:04 GMT

ಕಾಸರಗೋಡು: ಗಣರಾಜ್ಯೋತ್ಸವದಂಗವಾಗಿ ಕಾಸರಗೋಡು ನಗರಸಭಾ ಸ್ಟೇಡಿಯಂನಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮ ದಲ್ಲಿ ತಲೆಕೆಳಗಾಗಿಸಿ ಧ್ವಜಾರೋಹಣ ನೆರೆವೇರಿಸಿ ಮುಜುಗರಕ್ಕೆ ಒಳಗಾದ ಘಟನೆ ನಡೆದಿದ್ದು, ಘಟನೆ  ವಿವಾದಕ್ಕೆ ಕಾರಣವಾಗಿದೆ.

ತಪ್ಪು ಅರಿವಾದ ಬಳಿಕ ಸರಿಪಡಿಸಿ ಬಳಿಕ ಧ್ವಜಾರೋಹಣ ಮಾಡಲಾಯಿತು. ರಾಜ್ಯ ಬಂದರು ಸಚಿವ ಅಹಮ್ಮದ್ ದೇವರ್ ಕೋವಿಲ್ ಧ್ವಜಾರೋಹಣ ನೆರವೇರಿಸಿದ್ದರು.

ಧ್ವಜ ವಂದನೆ ಸ್ವೀಕರಿಸಿದ ಬಳಿಕವಷ್ಟೇ ಮಾಧ್ಯಮದವರು ಸಚಿವರ ಹಾಗೂ  ಅಧಿಕಾರಿಗಳ ಗಮನಕ್ಕೆ ತಂದಿದ್ದು, ತಪ್ಪು ಅರಿವಾಗಿ ಧ್ವಜವನ್ನು  ಕೆಳಗಿಸಿ ಸರಿಪಡಿಸಲಾಯಿತು. 

ಧ್ವಜ ತೆಲೆ ಕೆಳಗಾಗಿಸಿ  ಹಾರಿದರೂ ಸಚಿವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸರು ಮತ್ತು ಅಧಿಕಾರಿಗಳು   ಉಪಸ್ಥಿತರಿದ್ದರೂ ವಂದನೆ ಸ್ವೀಕರಿಸುವ ತನಕ ಗಮನಕ್ಕೆ ಬಂದಿರದಿರುವುದು ದೊಡ್ಡ ಲೋಪ ಎಂದು ಸ್ಥಳೀಯರು ದೂರಿದ್ದಾರೆ.

ಘಟನೆ ಬಳಿಕ ಸಚಿವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಸಕ್ಸೆನಾ ಹಾಗೂ ಜಿಲ್ಲಾ ಹೆಚ್ಚುವರಿ ದಂಡಾಧಿಕಾರಿ ಎ.ಕೆ. ರಮೇ೦ದ್ರನ್ ಅವರನ್ನು ಕರೆಸಿ ಅತೃಪ್ತಿ  ಸೂಚಿಸಿದ್ದು, ತನಿಖೆಗೆ ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಆದೇಶ ನೀಡಿದ್ದಾರೆ.

ಲೋಪದ ಬಗ್ಗೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್   ಹಾಗೂ ಇತರ ನಾಯಕರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News