×
Ad

ಬಾವಿಗೆ ಅಳವಡಿಸಿದ ಪಂಪ್‌ಸೆಟ್ ಕಳವು

Update: 2022-01-26 20:02 IST

ಉಡುಪಿ : ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರ ಎಂಬಲ್ಲಿ ಬಾವಿಗೆ ಆಳವಡಿಸಲಾದ ಪಂಪ್‌ಸೆಟ್ ಸೇರಿದಂತೆ ಸಾವಿರಾರು ರೂ. ಮೌಲ್ಯದ ಸೊತ್ತುಗಳು ಜ.25ರಂದು ರಾತ್ರಿ ಕಳವಾಗಿರುವ ಬಗ್ಗೆ ವರದಿಯಾಗಿದೆ.

ಅಂಬಲಪಾಡಿ ಬಂಕೇರಕಟ್ಟದ ರೂಪಶ್ರೀ ಭಟ್ ಎಂಬವರು ಸುಮಾರು 8 ತಿಂಗಳುಗಳಿಂದ ಸುಬ್ರಹ್ಮಣ್ಯ ನಗರದಲ್ಲಿ ಹೊಸದಾಗಿ ಮನೆ ನಿರ್ಮಾಣ ಮಾಡಲು ಬಾವಿ ನಿರ್ಮಿಸಿದ್ದು, ಅದಕ್ಕೆ ಪಂಪ್‌ಸೆಟ್ ಅಳವಡಿಸಿದ್ದರು. ಕಳ್ಳರು ಬಾವಿಗೆ ಅಳವಡಿಸಿದ ಪಂಪ್‌ಸೆಟ್ ಹಾಗೂ ಕೇಬಲ್ನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 54,830ರೂ. ಎಂದು ಅಂದಾಜಿಸ ಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News