189 ಮಂದಿಗೆ ಪೊಲೀಸ್ ಶೌರ್ಯ ಪ್ರಶಸ್ತಿ; ಜಮ್ಮುಕಾಶ್ಮೀರಕ್ಕೆ ಸಿಂಹಪಾಲು

Update: 2022-01-26 18:15 GMT

ಹೊಸದಿಲ್ಲಿ, ಜ. 26: ಈ ವರ್ಷ 189 ಮಂದಿ ಪೊಲೀಸ್ ಶೌರ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪೊಲೀಸ್ ಶೌರ್ಯ ಪ್ರಶಸ್ತಿಗಳಲ್ಲಿ ಜಮ್ಮು ಹಾಗೂ ಕಾಶ್ಮೀರ ಪೊಲೀಸ್ ಸಿಂಹಪಾಲು ಪಡೆದುಕೊಂಡಿದ್ದು, 115 ಪ್ರಶಸ್ತಿಗಳನ್ನು ಗಳಿಸಿದೆ. ಚತ್ತೀಸ್‌ಗಢ ಪೊಲೀಸ್ 10 ಹಾಗೂ ಒಡಿಶಾ ಪೊಲೀಸ್ 9 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಕೇಂದ್ರ ಶಸಸ್ತ್ರ ಪೊಲೀಸ್ ಪಡೆಗಳಲ್ಲಿ ಸಿಆರ್‌ಪಿಎಫ್ 30, ಐಟಿಬಿಪಿ ಮತ್ತು ಎಸ್‌ಎಸ್‌ಬಿ ತಲಾ ಮೂರು ಹಾಗೂ ಬಿಎಸ್ಎಫ್ ಎರಡು ಶೌರ್ಯ ಪ್ರಶಸ್ತಿಗಳನ್ನು ಸ್ವೀಕರಿಸಿದೆ.

 ಜಮ್ಮು ಹಾಗೂ ಕಾಶ್ಮೀರದಲ್ಲಿ ಉಗ್ರರನ್ನು ಹತ್ಯೆಗೈದ ಅಲ್ಲಿನ ಪೊಲೀಸ್ ಸಿಬ್ಬಂದಿ, ಕಾಶ್ಮೀರದಲ್ಲಿ ಉಗ್ರರೊಂದಿಗೆ ಹೋರಾಡಿ ಮೃತಪಟ್ಟ ಸಿಆರ್‌ಪಿಎಫ್‌ನ  ಹೆಡ್ ಕಾನ್ಸ್‌ಟೆಬಲ್, ಜಾರ್ಖಂಡ್‌ನ ದುಮ್ಕಾದಲ್ಲಿ ಗುಂಡಿನಿಂದ ಗಾಯಗೊಂಡ ಬಳಿಕವೂ ಮಾವೋವಾದಿಗಳ ವಿರುದ್ಧ ಹೋರಾಡಿದ ಎಸ್‌ಎಸ್‌ಬಿ ಕಾನ್ಸ್‌ಟೆಬಲ್, ಪಶ್ಚಿಮಬಂಗಾಳದಲ್ಲಿ ಬಾಂಗ್ಲಾದೇಶದ ಜಾನುವಾರು ಕಳ್ಳ ಸಾಗಾಟಗಾರರನ್ನು ಗುಂಡು ಹಾರಿಸಿ ಹತ್ಯೆಗೈದ ಬಿಎಸ್ಎಫ್ ಕಾನ್ಸ್‌ಟೆಬಲ್ ಕೂಡ ಶೌರ್ಯ ಪ್ರಶಸ್ತಿ ಪಡೆದುಕೊಂಡವರಲ್ಲಿ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News