ಅರ್ಧ ಆದಾಯ, ದುಪ್ಪಟ್ಟು ಹಣದುಬ್ಬರದಿಂದ ಜನರು ಬಳಲುತ್ತಿದ್ದಾರೆ: ಆದಿತ್ಯನಾಥ್ ಸರಕಾರಕ್ಕೆ ಅಖಿಲೇಶ್ ತರಾಟೆ

Update: 2022-01-27 05:48 GMT

ಲಕ್ನೊ: ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಬುಧವಾರ ಬರೆದಿರುವ  ಬಹಿರಂಗ ಪತ್ರದಲ್ಲಿ  ಉತ್ತರ ಪ್ರದೇಶ ಸರಕಾರವನ್ನು ಹಲವಾರು ವಿಷಯಗಳ ಕುರಿತು ತರಾಟೆಗೆ ತೆಗೆದುಕೊಂಡರು. ಪ್ರಸ್ತುತ ಹಂತವನ್ನು "ಅರ್ಧ ಆದಾಯ, ದುಪ್ಪಟ್ಟು ಹಣದುಬ್ಬರ" ಎಂದು ಕರೆದಿದ್ದಾರೆ. ಈಗಿನ ಸರಕಾರವು "ಕಷ್ಟಗಳು ಮತ್ತು ತೊಂದರೆಗಳನ್ನು" ಮಾತ್ರ ತಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಡವರು ಮತ್ತು ತುಳಿತಕ್ಕೊಳಗಾದವರಲ್ಲದೆ, ನುರಿತ ಹಾಗೂ ಕೌಶಲ್ಯರಹಿತ ಕಾರ್ಮಿಕರು, ನಿರುದ್ಯೋಗಿ ಯುವಕರು, ಆರ್ಥಿಕತೆಯ ಭೀಕರ ಸ್ಥಿತಿಯಿಂದಾಗಿ ಕೆಲಸದಿಂದ ವಜಾಗೊಂಡ ಜನರು, ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಹಾಗೂ ರೈತರು ಕೂಡ ಈಗಿನ ಅರ್ಧ ಆದಾಯ, ದುಪ್ಪಟ್ಟು ಹಣದುಬ್ಬರ ಪರಿಸ್ಥಿತಿಯಿಂದ ಬಳಲುತ್ತಿದ್ದಾರೆ. ಪ್ರಸ್ತುತ ಸರಕಾರ ಅಧಿಕಾರಕ್ಕೆ ಬಂದ ನಂತರ  ಇದು ಕೇವಲ ಕಷ್ಟಗಳು ಮತ್ತು ತೊಂದರೆಗಳನ್ನು ತಂದಿದೆ" ಎಂದು ಎಸ್‌ಪಿ ಮುಖ್ಯಸ್ಥರು ಹಿಂದಿಯಲ್ಲಿ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಬುಧವಾರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಟ್ವಿಟರ್‌ನಲ್ಲಿ ಪತ್ರವನ್ನು ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News