ಕೋವಿಡ್ ನಿರ್ಬಂಧ ಸಡಿಲಿಸಿದ ಬ್ರಿಟನ್

Update: 2022-01-27 18:26 GMT
ಸಾಂದರ್ಭಿಕ ಚಿತ್ರ

ಲಂಡನ್, ಜ.27: ಒಮೈಕ್ರಾನ್ ರೂಪಾಂತರಿ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಾರಿಗೊಳಿಸಿದ್ದ ನಿರ್ಬಂಧಗಳನ್ನು ಇಂಗ್ಲೆಂಡ್ ಗುರುವಾರ ಸಡಿಲಗೊಳಿಸಿದೆ. ಇದರಂತೆ ಒಳಾಂಗಣ ಪ್ರದೇಶಗಳಲ್ಲಿ ಇನ್ನು ಮುಂದೆ ಮಾಸ್ಕ್‌ಗಳ ಅಗತ್ಯವಿಲ್ಲ ಮತ್ತು ಲಸಿಕೆ ಪ್ರಮಾಣಪತ್ರಗಳ ಅಗತ್ಯವನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.

ಕಳೆದೆರಡು ವಾರದಲ್ಲಿ ಪಾಸಿಟಿವ್ ಪ್ರಕರಣ ತೀವ್ರಗತಿಯಲ್ಲಿ ಇಳಿಕೆಯಾದ್ದರಿಂದ (ಆದರೆ ಈಗಲೂ ಅಧಿಕ ಮಟ್ಟದಲ್ಲೇ ಇದೆ) ಮತ್ತು 37 ಮಿಲಿಯನ್‌ಗೂ ಅಧಿಕ ಜನತೆ ಬೂಸ್ಟರ್ ಡೋಸ್ ಲಸಿಕೆ ಪಡೆದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸರಕಾರದ ನಿರ್ಧಾರವನ್ನು ಸ್ವಾಗತಿಸಿ ಲಂಡನ್‌ನ ಪ್ರಮುಖ ರಸ್ತೆಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ಜನರು ಸಂಭ್ರಮಾಚರಿಸಿದರು ಎಂದು ಮೂಲಗಳು ಹೇಳಿವೆ.

ಇದೀಗ ಮತ್ತೆ ಈ ಹಿಂದಿನಂತೆಯೇ ಸಹಜ ಸ್ಥಿತಿಯಲ್ಲಿ ಜೀವಿಸುವ ಅವಕಾಶ ದೊರಕಿರುವುದು ನಿಜಕ್ಕೂ ಉತ್ತಮ ವಿಷಯವಾಗಿದೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News