ಮಹಾರಾಷ್ಟ್ರದ 12 ಬಿಜೆಪಿ ಶಾಸಕರ ಒಂದು ವರ್ಷದ ಅಮಾನತು ರದ್ದುಪಡಿಸಿದ ಸುಪ್ರೀಂ ಕೋರ್ಟ್

Update: 2022-01-28 06:26 GMT

ಮುಂಬೈ: ಅಶಿಸ್ತಿನ ವರ್ತನೆ ಆರೋಪದ ಮೇಲೆ 12 ಬಿಜೆಪಿ ಶಾಸಕರನ್ನು ಒಂದು ವರ್ಷದವರೆಗೆ ಅಮಾನತುಗೊಳಿಸುವ ಮಹಾರಾಷ್ಟ್ರ ವಿಧಾನಸಭೆಯ ನಿರ್ಣಯವನ್ನು ಸುಪ್ರೀಂ ಕೋರ್ಟ್ ಶುಕ್ರವಾರ  ತಳ್ಳಿಹಾಕಿದೆ.

"ಅಧಿವೇಶನದ ನಂತರವೂ ಶಾಸಕರನ್ನು ಅಮಾನತುಗೊಳಿಸುವುದು ಅಸಂವಿಧಾನಿಕ ಮತ್ತು ಕಾನೂನುಬಾಹಿರ" ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.

ಅಧಿವೇಶನಕ್ಕೆ ಮಾತ್ರ ಅಮಾನತುಗೊಳಿಸಬಹುದು ಎಂದು ನಿಯಮಗಳು ಹೇಳುತ್ತಿದ್ದರೂ 12 ಶಾಸಕರನ್ನು ಅಧಿವೇಶನದ ನಂತರ ಒಂದು ವರ್ಷ ಅಮಾನತುಗೊಳಿಸಲಾಗಿದೆ.

ಸಭಾಧ್ಯಕ್ಷರ ಚೇಂಬರ್‌ನಲ್ಲಿ ಸಭಾಧ್ಯಕ್ಷ ಭಾಸ್ಕರ್ ಜಾಧವ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ರಾಜ್ಯ ಸರಕಾರ ಆರೋಪಿಸಿದ ನಂತರ ಬಿಜೆಪಿ ಶಾಸಕರನ್ನು ಕಳೆದ ವರ್ಷ ಜುಲೈ 5 ರಂದು ವಿಧಾನಸಭೆಯಿಂದ ಅಮಾನತುಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News