ಏರ್ ಇಂಡಿಯಾ ಮಾರಾಟ ಪ್ರಕ್ರಿಯೆ ಅತ್ಯಂತ ಸವಾಲಿನಿಂದ ಕೂಡಿತ್ತು: ಜ್ಯೋತಿರಾದಿತ್ಯ ಸಿಂಧಿಯಾ

Update: 2022-01-28 07:11 GMT

ಹೊಸದಿಲ್ಲಿ: ಏರ್ ಇಂಡಿಯಾವನ್ನು ಟಾಟಾ ಗ್ರೂಪ್‌ಗೆ ಮಾರಾಟ ಮಾಡುವುದು "ಅತ್ಯಂತ ಕಷ್ಟಕರ ಮತ್ತು ಸವಾಲಿನ ವಹಿವಾಟು" ಆಗಿತ್ತು ಎಂದು  ಟಾಟಾ  ಸಮೂಹವು ಔಪಚಾರಿಕವಾಗಿ ವಿಮಾನಯಾನವನ್ನು ವಹಿಸಿಕೊಂಡ ನಂತರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಇಂದು ಎನ್‌ಡಿಟಿವಿಗೆ ತಿಳಿಸಿದರು.

"ಇದೊಂದು ಮಹತ್ವದ  ಕೊಡು-ಕೊಳ್ಳುವಿಕೆಯಾಗಿತ್ತು. ಅದರ ಅಡಿಯಲ್ಲಿ ಎಲ್ಲಾ ಸಾಲದತ್ತ ಗಮನ ಹರಿಸಲಾಗಿದೆ.  ಇದರಿಂದ ಎಲ್ಲರಿಗೂ ಲಾಭವಾಗಿದೆ. ಇದು ಅಕೌಂಟೆನ್ಸಿ ದೃಷ್ಟಿಕೋನದಿಂದ ಅತ್ಯಂತ ಕಷ್ಟಕರ ಮತ್ತು ಸವಾಲಿನ ವ್ಯವಹಾರವಾಗಿದೆ" ಎಂದು ಸಿಂಧಿಯಾ ಹೇಳಿದರು.

"ಹಲವಾರು ಕಾನೂನು ಪ್ರಕ್ರಿಯೆಗಳು ಸಹ ಎದುರಾಗಿದ್ದವು. ಎಲ್ಲವನ್ನು ನಿರ್ದಿಷ್ಟ ಗಡುವಿನಡಿಯಲ್ಲಿ ಪೂರೈಸಬೇಕಾಗಿತ್ತು, ಆದ್ದರಿಂದ ಅದು ದೊಡ್ಡ ಸವಾಲಾಗಿತ್ತು.  ಆದರೆ ನಾವು ಎಲ್ಲವನ್ನೂ ಮಾಡಿದ್ದೇವೆ.  ಈ ಪ್ರಕ್ರಿಯೆಯಲ್ಲಿ ತುಂಬಾ ಶ್ರಮಿಸಿದ ಹಾಗೂ  ಈ ವಹಿವಾಟನ್ನು ಯಶಸ್ವಿಯಾಗಿ ಪೂರೈಸಲಾಗಿದೆ ಎಂದು ಖಚಿತಪಡಿಸಿಕೊಂಡ ಎರಡೂ ಕಡೆಯ ಎಲ್ಲಾ ಅಧಿಕಾರಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ಕ್ರೆಡಿಟ್ ಅವರಿಗೆ ಸಲ್ಲುತ್ತದೆ" ಎಂದು ಸಿಂಧಿಯಾ ಹೇಳಿದರು.

ಏರ್ ಇಂಡಿಯಾಗೆ ಹೊರೆಯಾಗಿರುವ ಸಾಲದಿಂದ ಮಾರಾಟ ಅನಿವಾರ್ಯವಾಗಿತ್ತು ಎಂದ ಸಚಿವರು ಸರಕಾರವು ಇನ್ನು ಮುಂದೆ ಏರ್ ಇಂಡಿಯಾವನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಹಂತವನ್ನು ತಲುಪಿತ್ತು.  ಇದು ಸಾಧ್ಯವಾಗಲಿಲ್ಲ ಎಂದು  ಸಿಂಧಿಯಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News