ಗೋವಾ ಚುನಾವಣೆ: ಸ್ಪರ್ಧೆಯಿಂದ ಹಿಂದೆ ಸರಿದ ತೃಣಮೂಲದ ಲುಯಿಝಿನ್ಹೊ ಫಲೈರೊ

Update: 2022-01-28 07:42 GMT

ಪಣಜಿ (ಗೋವಾ): ಮುಂಬರುವ ವಿಧಾನಸಭೆ ಚುನಾವಣೆಗೆ ಗೋವಾದ ಫಟೋರ್ಡಾ ಕ್ಷೇತ್ರದಿಂದ ತೃಣಮೂಲ ಅಭ್ಯರ್ಥಿಯಾಗಿದ್ದ ತೃಣಮೂಲ ಕಾಂಗ್ರೆಸ್ ಉಪಾಧ್ಯಕ್ಷ ಲುಯಿಝಿನ್ಹೊ ಫಲೈರೊ ಶುಕ್ರವಾರ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.

"ನಾನು ಫಟೋರ್ಡಾದಿಂದ ಗೋವಾ ಟಿಎಂಸಿ ಅಭ್ಯರ್ಥಿಯಾಗಿ ಹಿಂದೆ ಸರಿಯುವುದಾಗಿ ಘೋಷಿಸುತ್ತೇನೆ ಹಾಗೂ  ಯುವ ವಕೀಲರಿಗೆ ಬ್ಯಾಟನ್  ಹಸ್ತಾಂತರಿಸುತ್ತೇನೆ. ಮಹಿಳೆಯರನ್ನು ಸಬಲೀಕರಣಗೊಳಿಸುವುದು  ಪಕ್ಷದ ನೀತಿಯಾಗಿದೆ " ಎಂದು ಲುಯಿಝಿನ್ಹೊ ಫಲೈರೊ ಹೇಳಿದರು.

ಫಟೋರ್ಡಾ ಕ್ಷೇತ್ರಕ್ಕೆ ತೃಣಮೂಲದ ಹೊಸ ಅಭ್ಯರ್ಥಿಯಾಗಿ ಸಿಯೋಲಾ ಅವಿಲಿಯಾ ವಾಸ್ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News