ಭಾರತ್ ಬಯೋಟೆಕ್‌ನ ಬೂಸ್ಟರ್ ಡೋಸ್ ಪ್ರಯೋಗಕ್ಕೆ ಅನುಮೋದನೆ

Update: 2022-01-28 09:18 GMT
Photo: AFP

  ಹೊಸದಿಲ್ಲಿ: ಕೋವಾಕ್ಸಿನ್‌ನ ಎರಡೂ ಡೋಸ್‌ಗಳನ್ನು ಪಡೆದ ಜನರ ಮೇಲೆ ಇಂಟ್ರಾನಾಸಲ್ ಬೂಸ್ಟರ್ ಡೋಸ್‌ನ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಲಸಿಕೆ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ಅನುಮೋದನೆಯನ್ನು ಪಡೆದಿದೆ.

ಭಾರತದ ಡ್ರಗ್ ಕಂಟ್ರೋಲರ್ ಜನರಲ್ ಇಂದು ಮೂರನೇ ಹಂತದ ಪ್ರಯೋಗಗಳಿಗೆ ಚಾಲನೆ ನೀಡಲು ಅನುಮತಿ ನೀಡಿದೆ. ದೇಶದ ಒಂಬತ್ತು ಸ್ಥಳಗಳಲ್ಲಿ ಪ್ರಯೋಗಗಳನ್ನು ನಡೆಸಲಾಗುವುದು.

ಇಂಟ್ರಾನಾಸಲ್ ಲಸಿಕೆಯು ಬೂಸ್ಟರ್ ಆಗಿದ್ದು, ಸಾಮೂಹಿಕ ಲಸಿಕೆ ಅಭಿಯಾನಗಳನ್ನು ನಿರ್ವಹಿಸಲು ಸುಲಭವಾಗುತ್ತದೆ.

ಮೂಗಿನ ಲಸಿಕೆ  BBV154, ಸೋಂಕಿನ ಸ್ಥಳದಲ್ಲಿ ಪ್ರತಿರಕ್ಷಣಾ ಪ್ರತಿಕ್ರಿಯೆಗಳನ್ನು ಉತ್ತೇಜಿಸುತ್ತದೆ.  ಸೋಂಕು ಮತ್ತು ಕೋವಿಡ್ -19 ರ ಪ್ರಸರಣವನ್ನು ತಡೆಯುವಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.

ಮೂಗಿನ ಲಸಿಕೆಯನ್ನು ಸುಲಭವಾಗಿ ನಿರ್ವಹಿಸಬಹುದು ಹಾಗೂ  ಅದಕ್ಕೆ ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರ ಅಗತ್ಯವಿಲ್ಲ ಎಂಬ ಅಂಶವನ್ನು ಸಹ ಕಂಪೆನಿ ಒತ್ತಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News