ಉ.ಪ್ರ.ಚುನಾವಣೆ: ಅಯೋಧ್ಯೆಯಲ್ಲಿ ಹಾಲಿ ಶಾಸಕ ವಿ.ಪಿ.ಗುಪ್ತಾ ಬಿಜೆಪಿ ಅಭ್ಯರ್ಥಿ

Update: 2022-01-28 15:41 GMT
ವಿ.ಪಿ.ಗುಪ್ತಾ(photo:facebook/@VPGuptaBJP)

ಲಕ್ನೋ,ಜ.28: ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಾಗಿ ತನ್ನ 91 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಶುಕ್ರವಾರ ಬಿಡುಗಡೆಗೊಳಿಸಿದ್ದು, 13 ಸಚಿವರು ಮತ್ತು ಅಯೋಧ್ಯೆಯ ಹಾಲಿ ಶಾಸಕ ಪಟ್ಟಿಯಲ್ಲಿದ್ದಾರೆ.

ಪಕ್ಷವು ಸಹಕಾರ ಸಚಿವ ಮುಕುಲ ಬಿಹಾರಿ ವರ್ಮಾರನ್ನು ಕೈಬಿಟ್ಟಿದ್ದು, ಅವರ ಪುತ್ರ ಗೌರವ ತನ್ನ ತಂದೆಯ ಕೈಸರ್‌ಗಂಜ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಉ.ಪ್ರ.ಮುಖ್ಯಮಂತ್ರಿ ಆದಿತ್ಯನಾಥರ ಮಾಧ್ಯಮ ಸಲಹೆಗಾರ ಶಲಭಮಣಿ ತ್ರಿಪಾಠಿ ಅವರನ್ನು ದೇವರಿಯಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.

ಅಯೋಧ್ಯೆಯಲ್ಲಿ ತನ್ನ ಅಭ್ಯರ್ಥಿಯಾಗಿ ಹಾಲಿ ಶಾಸಕ ವೇದ ಪ್ರಕಾಶ ಗುಪ್ತಾ ಅವರನ್ನೇ ಬಿಜೆಪಿ ಹೆಸರಿಸಿದೆ.

ಸಿದ್ಧಾರ್ಥನಾಥ ಸಿಂಗ್ (ಅಲಹಾಬಾದ್ ಪಶ್ಚಿಮ) ಮತ್ತು ನಂದಗೋಪಾಲ ಗುಪ್ತಾ ‘ನಂದಿ’(ಅಲಹಾಬಾದ್ ದಕ್ಷಿಣ) ಅವರು ಬಿಜೆಪಿ ಟಿಕೆಟ್ ಪಡೆದಿರುವ ಸಚಿವರಲ್ಲಿ ಸೇರಿದ್ದಾರೆ. ಕೃಷಿ ಸಚಿವ ಸೂರ್ಯಪ್ರತಾಪ ಶಾಹಿ ಅವರೂ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News