×
Ad

ನರ್ಸ್ ನಾಪತ್ತೆ

Update: 2022-01-28 23:13 IST

ಮಂಗಳೂರು, ಜ.28: ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸುಸನ್ನ ಡಿಕೋಸ್ತ (24) ಜ.15ರಂದು ನಾಪತ್ತೆಯಾಗಿದ್ದಾರೆ.

ಹಾಸ್ಟೆಲ್‌ನಿಂದ ಆಸ್ಪತ್ರೆಗೆ ಕೆಲಸಕ್ಕೆಂದು ಹೋದವರು ಈವರೆಗೆ ಮರಳಿ ಬಂದಿಲ್ಲ ಎಂದು ಬರ್ಕೆ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ಸುಸನ್ನ ಡಿಕೋಸ್ತ 5.2 ಅಡಿ ಎತ್ತರವಿದ್ದು, ಕನ್ನಡ, ಕೊಂಕಣಿ, ಹಿಂದಿ, ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ.

ಗೋಧಿ ಮೈಬಣ್ಣ, ಉದ್ದ ಮುಖ, ಸಪೂರ ಶರೀರ ಹೊಂದಿದ್ದು ಕಪ್ಪು ಜೀನ್ಸ್ ಪ್ಯಾಂಟ್, ಕೆಂಪು ಬಣ್ಣದ ಟೀ ಶರ್ಟ್ ಧರಿಸಿದ್ದರು. ಈಕೆಯ ಬಗ್ಗೆ ಮಾಹಿತಿ ದೊರೆತವರು ಬರ್ಕೆ ಠಾಣೆಗೆ ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News