ಜೆರುಸಲೇಂನಲ್ಲಿ ಪೆಲೆಸ್ತೀನಿಯರ ಮನೆ ಧ್ವಂಸ ಪ್ರಕರಣ: ಅಂತರಾಷ್ಟ್ರೀಯ ನ್ಯಾಯಾಲಯದ ಮೆಟ್ಟಲೇರಿದ ಸಂತ್ರಸ್ತರು

Update: 2022-01-29 16:21 GMT
photo:twitter@IntlCrimCourt

ಜೆರುಸಲೇಂ, ಜ.29: ಆಕ್ರಮಿತ ಪೂರ್ವ ಜೆರುಸಲೇಂನಲ್ಲಿ ಕಳೆದ ವಾರ ಅಕ್ರಮ ನಿರ್ಮಾಣ ಎಂದು ಹೇಳಿ ಪೆಲೆಸ್ತೀನೀಯರ ಮನೆಯನ್ನು ಧ್ವಂಸಗೊಳಿಸಿದ ಇಸ್ರೇಲ್ ಅಧಿಕಾರಿಗಳ ವಿರುದ್ಧ ಸಂತ್ರಸ್ತ ಕುಟುಂಬ ಅಂತರಾಷ್ಟೀಯ ಕ್ರಿಮಿನಲ್ ನ್ಯಾಯಾಲಯ(ಐಸಿಸಿ)ದಲ್ಲಿ ಪ್ರಕರಣ ದಾಖಲಿಸಿದೆ ಎಂದು ವರದಿಯಾಗಿದೆ.

ಪೂರ್ವ ಜೆರುಸಲೇಂನ ಉಪನಗರ ಅಬುಟೋರ್ನಲ್ಲಿ 15 ಮಂದಿಯಿದ್ದ ಮನೆಯನ್ನು ಅನುಮತಿ ಪಡೆಯದೆ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಹೇಳಿದ್ದ ಜೆರುಸಲೇಂ ನಗರಪಾಲಿಕೆ, ಇಸ್ರೇಲ್ ಭದ್ರತಾ ಪಡೆಗಳ ಉಪಸ್ಥಿತಿಯಲ್ಲಿ ಮನೆಯನ್ನು ನೆಲಸಮಗೊಳಿಸಿತ್ತು. ಇದನ್ನು ಪ್ರತಿಭಟಿಸಿದಾಗ ಇಸ್ರೇಲ್ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ರಕರ್ತರ ಸಹಿತ 9 ಮಂದಿ ಗಾಯಗೊಂಡಿದ್ದರು. ‌

ಗಾಯಗೊಂಡವರಲ್ಲಿ ಸಂತ್ರಸ್ತ ಕುಟುಂಬದ 6 ಮಂದಿಯೂ ಸೇರಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಇತರರನ್ನು ಬಲವಂತವಾಗಿ ಅಲ್ಲಿಂದ ತೆರವುಗೊಳಿಸಲಾಗಿತ್ತು. ಇದೇ ಸಂದರ್ಭ ಪೂರ್ವ ಜೆರುಸಲೇಂನ ಶೇಖ್ ಜರ್ರಾ ನಗರದಲ್ಲಿ ಮತ್ತೊಂದು ಮನೆಯನ್ನು ನೆಲಸಮಗೊಳಿಸಿರುವುದನ್ನು ಪ್ರಶ್ನಿಸಿ ಆ ಕುಟುಂಬದವರು ಇಸ್ರೇಲ್ ಅಧಿಕಾರಿಗಳ ವಿರುದ್ಧ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ(ಐಸಿಸಿ)ದಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಲ್ ಜಝೀರಾ ವರದಿ ಮಾಡಿದೆ.
/***/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News