×
Ad

ತನ್ನ ಭದ್ರತೆಗೆ ನಿಯೋಜಿಸಿದ ಪೊಲೀಸರು ನನಗೆ ಶೂಟ್ ಮಾಡಬಹುದು: ಅಬ್ದುಲ್ಲಾ ಅಝಂ ಖಾನ್

Update: 2022-01-29 22:17 IST

ರಾಮ್ಪುರ, ಜ. 29: ತನ್ನ ಭದ್ರತೆಗೆ ನಿಯೋಜಿಸಲಾಗಿರುವ ಪೊಲೀಸರ ಬಗ್ಗೆ ನಂಬಿಕೆ ಇಲ್ಲ. ಅವರು ತನಗೆ ಗುಂಡು ಹಾರಿಸಬಹುದು ಎಂದು ಸಮಾಜವಾದಿ ಪಕ್ಷದ ಸಂಸದ ಅಝಮ್ ಖಾನ್ ಅವರ ಪುತ್ರ ಅಬ್ದುಲ್ಲಾ ಅಝಮ್ ಖಾನ್ ಅವರು ಶುಕ್ರವಾರ ಹೇಳಿದ್ದಾರೆ.

ರಾಂಪುರದ ಸುವಾರ್ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಟಿಕೆಟ್ನಿಂದ ಸ್ಪರ್ಧಿಸುತ್ತಿರುವ ಅಬ್ದುಲ್ಲಾ, ತನ್ನ ಭದ್ರತೆಗೆ ನಿಯೋಜಿಸಲಾಗಿರುವ ಪೊಲೀಸರು ಮಾತ್ರ ತನ್ನ ಮೇಲೆ ಗುಂಡು ಹಾರಿಸಲು ಸಾಧ್ಯ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಪೊಲೀಸರು ಬಿಜೆಪಿ ಜೊತೆಗಿದ್ದಾರೆ. ಎರಡೂ ಸರಕಾರಗಳು ಬಿಜೆಪಿಯ ಜೊತೆಗಿದೆ. ನಾನು ಏಕಾಂಗಿ. ನನ್ನೊಂದಿಗೆ ಯಾರೂ ಇಲ್ಲ. ನನ್ನೊಂದಿಗಿರುವ ಪೊಲೀಸರ ಬಗ್ಗೆ ಕೂಡ ನನಗೆ ನಂಬಿಕೆ ಇಲ್ಲ. ಪೊಲೀಸರು ನನಗೆ ಗುಂಡು ಹಾರಿಸಬಹುದು. ಅವರನ್ನು ನನ್ನ ಭದ್ರತೆಗೆ ನಿಯೋಜಿಸಿರುವುದಲ್ಲ’’ ಎಂದಿದ್ದಾರೆ.

ರಾಂಪುರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಅಝಂ ಖಾನ್ ಅವರನ್ನು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ರಾಂಪುರದಿಂದ ಕಣಕ್ಕಿಳಿಸಿದೆ. ಪ್ರಸ್ತುತ ಅಝಂಖಾನ್ ವಿರುದ್ಧ ದಾಖಲಾಗಿರುವ ಹಲವು ಪ್ರಕರಣಕ್ಕೆ ಸಂಬಂಧಿಸಿ ಅವರು ಕಾರಾಗೃಹದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News