ಐಸಿಸಿ ಅಂಡರ್-19 ವಿಶ್ವಕಪ್: ಸೆಮೀಸ್‌ ಗೆ ಭಾರತ ಲಗ್ಗೆ

Update: 2022-01-30 05:37 GMT

ಆಂಟಿಗುವಾ: ಎಡಗೈ ವೇಗದ ಬೌಲರ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನದೊಂದಿಗೆ ಹಾಲಿ ಚಾಂಪಿಯನ್ ಬಾಂಗ್ಲಾದೇಶವನ್ನು ಬಗ್ಗುಬಡಿದ ಭಾರತ ಕಿರಿಯರ ತಂಡ ಐಸಿಸಿ ಅಂಡರ್-19 ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ಸ್ ತಲುಪಿದೆ.

ಒಟ್ಟು ಒಂಬತ್ತು ಅಂಡರ್-19 ವಿಶ್ವಕಪ್ ಕ್ವಾರ್ಟರ್ ಫೈನಲ್ ಪೈಕಿ ಏಳನ್ನು ಗೆದ್ದ ಸಾಧನೆ ಮಾಡಿರುವ ಭಾರತ ತಂಡ ಫೆಬ್ರುವರಿ 2ರಂದು ನಡೆಯುವ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ಸಿಆರ್‌ಪಿಎಫ್ ಸಿಬ್ಬಂದಿಯ ಮಗನಾದ ಉತ್ತರ ಪ್ರದೇಶದ ರವಿ, ರಾಜ್ಯದ ಹಿರಿಯ ಆಟಗಾರ ಮೊಹ್ಮದ್ ಶಮಿ ಮಾದರಿಯಲ್ಲೇ ಬೌಲಿಂಗ್ ನಡೆಸಿ ಎದುರಾಳಿ ತಂಡ 37.1 ಓವರ್‌ಗಳಲ್ಲಿ 111ಕ್ಕೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಏಳು ಓವರ್‌ಗಳಲ್ಲಿ ಒಂದು ಮೇಡನ್ ಸಹಿತ ಕೇವಲ 14 ರನ್ ನೀಡಿದ ರವಿ ಆರಂಭದಲ್ಲೇ ಮೂರು ವಿಕೆಟ್ ಪಡೆದು ಎದುರಾಳಿಗಳು ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ.

ಒಂದು ಹಂತದಲ್ಲಿ 7 ವಿಕೆಟ್ ನಷ್ಟಕ್ಕೆ 56 ರನ್ ಕಳೆದುಕೊಂಡು ದಯನೀಯ ಸ್ಥಿತಿಯಲ್ಲಿದ್ದ ಬಾಂಗ್ಲಾದೇಶಕ್ಕೆ ಎಸ್.ಎಂ.ಮೆಹ್ರಬ್ (3) ಮತ್ತು ಅಶೀಕರ್ ಝಮನ್ (16) ಅವರ ಜತೆಯಾಟದೊಂದಿಗೆ 100ರ ಗಡಿ ದಾಟಲು ನೆರವಾದರು. 30.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ನಿಗದಿತ ಗುರಿ ತಲುಪುವಲ್ಲಿ ಭಾರತಕ್ಕೆ ಆರಂಭಿಕ ಆಟಗಾರ ಅಂಕ್ರಿಶ್ ರಘುವಂಶಿ (44) ನೆರವಾದರು. ನಾಯಕ ಯಶ್ ಧುಲ್ (ನಾಟೌಟ್ 20) ಹಾಗೂ ಉಪನಾಯಕ ಶೇಖ್ ರಶೀದ್ (26) ಗೆಲುವಿನ ಔಪಚಾರಿಕತೆ ಮುಗಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News