ಐರ್ಲ್ಯಾಂಡ್-ಝಿಂಬಾಬ್ವೆ ನಡುವಿನ ಅಂಡರ್-19 ವಿಶ್ವಕಪ್ ಪಂದ್ಯದ ವೇಳೆ ಲಘು ಭೂಕಂಪನ

Update: 2022-01-30 06:05 GMT

 ಪೋರ್ಟ್ ಆಫ್ ಸ್ಪೇನ್: ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಐರ್ಲ್ಯಾಂಡ್-ಝಿಂಬಾಬ್ವೆ ನಡುವಿನ ಅಂಡರ್-19 ವಿಶ್ವಕಪ್ ನ ಪ್ಲೇಟ್ ಸೆಮಿ-ಫೈನಲ್ ಪಂದ್ಯದ ವೇಳೆ ಸಂಭವಿಸಿದ ಲಘು ಭೂಕಂಪನವನ್ನು  ಟೆಲಿವಿಷನ್ ಕ್ಯಾಮೆರಾ ಸೆರೆಹಿಡಿಯಿತು.

 ಆಟಗಾರರು ಇದರ ಕಂಪನದ ಅರಿವಿಲ್ಲದೆ ಪಂದ್ಯವನ್ನು ಮುಂದುವರಿಸಿದರೆ, ಕಾಮೆಂಟರಿ ಬಾಕ್ಸ್ ನಲ್ಲಿದ್ದ ವೀಕ್ಷಕವಿವರಣೆಗಾರರಿಗೆ ನಡುಕದ  ಅನುಭವವಾಗಿದೆ.

ಶನಿವಾರ ಪೋರ್ಟ್ ಆಫ್ ಸ್ಪೇನ್‌ನ ಕರಾವಳಿಯಲ್ಲಿ 5.2 ತೀವ್ರತೆಯ ಭೂಕಂಪವು ನಡುಕವನ್ನು ಉಂಟುಮಾಡಿತು.  

ಐಸಿಸಿ ವೀಕ್ಷಕವಿವರಣೆಗಾರ ಆಂಡ್ರ್ಯೂ ಲಿಯೊನಾರ್ಡ್, ಕಾಮೆಂಟರಿ ಬಾಕ್ಸ್ ಅಲುಗಾಡಲು ಆರಂಭಿಸಿದಾಗ ಭೂಕಂಪನದ ಬಗ್ಗೆ ವಿವರಿಸಿದರು.  ಆದರೆ ಲಘು ಭೂಕಂಪನ ಅನುಭವವಾದ ಕಾರಣ  ಅವರ ಧ್ವನಿಯಲ್ಲಿ ಯಾವುದೇ ಆತಂಕ ಇರಲಿಲ್ಲ.

ಝಿಂಬಾಬ್ವೆ ಇನಿಂಗ್ಸ್‌ನ 6 ನೇ ಓವರ್‌ನಲ್ಲಿ 20 ಸೆಕೆಂಡ್ ಕಾಲ ನಡೆದ ಲಘು ಭೂಕಂಪನದಿಂದಾಗಿ  ದೂರದರ್ಶನ ಕ್ಯಾಮೆರಾ ಅಲುಗಾಡಿದವು. ಐರ್ ಲ್ಯಾಂಡ್‌ನ ಸ್ಪಿನ್ನರ್ ಮ್ಯಾಥ್ಯೂ ಹಂಫ್ರೀಸ್ಗೆ ಭೂಕಂಪದಿಂದ ಯಾವುದೇ ತೊಂದರೆಯಾಗದ ಕಾರಣ ಅವರು ಬೌಲಿಂಗ್ ಮುಂದುವರಿಸಿದ್ದರು.

ಅಂಡರ್-19 ವಿಶ್ವಕಪ್ ಪಂದ್ಯದ ಕಾಮೆಂಟರಿ ಬಾಕ್ಸ್‌ನಿಂದ ಲಘು ಭೂಕಂಪನದ ವೀಡಿಯೊವನ್ನು ಪತ್ರಕರ್ತ ಪೀಟರ್ ಡೆಲ್ಲಾ ಪೆನ್ನಾ ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News