ಆಸ್ಟ್ರೇಲಿಯನ್ ಓಪನ್: ದಾಖಲೆಯ 21ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿದ ರಫೆಲ್ ನಡಾಲ್

Update: 2022-01-30 17:26 GMT

ಮೆಲ್ಬೋರ್ನ್, ಜ.31: ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ರಶ್ಯದ ಡೇನಿಯಲ್ ಮೆಡ್ವೆಡೆವ್ ವಿರುದ್ಧ 3-2 ಸೆಟ್‌ಗಳ ಅಂತರದಿಂದ ಜಯ ಸಾಧಿಸಿರುವ ಸ್ಪೇನ್‌ನ ಆಟಗಾರ ರಫೆಲ್ ನಡಾಲ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ಮೂಲಕ ವೃತ್ತಿಬದುಕಿನಲ್ಲಿ 21ನೇ ಬಾರಿ ಗ್ರ್ಯಾನ್  ಸ್ಲಾಮ್ ಪ್ರಶಸ್ತಿ ಜಯಿಸಿ ನೂತನ ದಾಖಲೆ ನಿರ್ಮಿಸಿದರು.

ತಲಾ 20 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿರುವ ರೋಜರ್ ಫೆಡರರ್ ಹಾಗೂ ನೊವಾಕ್ ಜೊಕೊವಿಕ್‌ರನ್ನು  ನಡಾಲ್ ಹಿಂದಿಕ್ಕಿದರು.

ರವಿವಾರ 5 ಗಂಟೆ, 24 ನಿಮಿಷಗಳ ಕಾಲ ನಡೆದ ಫೈನಲ್ ಹಣಾಹಣಿಯಲ್ಲಿ ನಡಾಲ್ ಅವರು  ಮೆಡ್ವೆಡೆವ್ ರನ್ನು 2-6, 6-7(5), 6-4, 6-4, 7-5 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಎರಡನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News