×
Ad

ಉಡುಪಿ: ನರ್ಮ್ ಬಸ್ ದರ ಇಳಿಕೆಗೆ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಆಗ್ರಹ

Update: 2022-01-30 20:16 IST

ಉಡುಪಿ, ಜ.30: ಪ್ರಯಾಣಿಕರಿಗೆ ಯಾವುದೇ ಮುನ್ಸೂಚನೆ ನೀಡದೆ ಕೋವಿಡ್ ಮೂರನೇ ಅಲೆಯ ಸಂಕಷ್ಟ ಕಾಲದಲ್ಲಿ ಜೆ-ನರ್ಮ್ ಬಸ್ ಪ್ರಯಾಣ ದರದಲ್ಲಿ 2ರಿಂದ 5 ರೂ. ತನಕ ಹೆಚ್ಚಿಸುವ ಮೂಲಕ ಕನಿಷ್ಠ ದರ 8ರಿಂದ 10 ರೂ.ಗೆ ಏರಿಸಲಾಗಿದೆ. ಇದರಿಂದಾಗಿ ಜನ ಸಾಮಾನ್ಯರಿಗೆ ಬಹಳಷ್ಟು ಸಮಸ್ಯೆಯಾಗಿದ್ದು ಕೂಡಲೇ ಜಿಲ್ಲಾಡಳಿತ ಈ ಕುರಿತು ಮುತುವರ್ಜಿ ವಹಿಸಿ ದರ ಕಡಿಮೆ ಮಾಡಬೇಕೆಂದು ಸಾಲಿಡಾರಿಟಿ ಯೂತ್ಮೂವ್ಮೆಂಟ್ ಆಗ್ರಹಿಸಿದೆ.

ಉಡುಪಿ ಜಿಲ್ಲೆಯೊಂದರಲ್ಲೇ ಸುಮಾರು 36 ನರ್ಮ್ ಬಸ್‌ಗಳು ಜಿಲ್ಲೆಯ 51 ಮಾರ್ಗಗಳಲ್ಲಿ ಸಂಚರಿಸುತ್ತಿದ್ದವು. ಲಾಕ್‌ಡೌನ್ ಕಾರಣ ಇವುಗಳ ಸಂಚಾರ ಸ್ಥಗಿತಗೊಂಡಿತ್ತು. ಲಾಕ್‌ಡೌನ್ ತೆರವಾದರೂ ನರ್ಮ್ ಬಸ್‌ಗಳ ಸಂಚಾರವಿ ರಲಿಲ್ಲ. 13 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಉಡುಪಿ ಜಿಲ್ಲೆಯ ಜನಸಂಖ್ಯೆಗೆ ಈಗಿರುವ ನರ್ಮ್ ಬಸ್ಸುಗಳ ಸಂಖ್ಯೆ ಸಾಲುವುದಿಲ್ಲ. ಉಡುಪಿ ಮಂಗಳೂರಿಗೆ ಸೇರಿದ ನರ್ಮ್ ಬಸ್ಸುಗಳಿಗೆ ಮಾತ್ರ ಪ್ರಯಾಣ ದರವನ್ನು ಜಾಸ್ತಿ ಮಾಡುವುದರ ಹಿಂದೆ ಖಾಸಗಿ ಬಸ್‌ಗಳ ಮಾಲಕರ ಲಾಬಿಯಿದೆ ಎಂಬು ದಂತೂ ಸತ್ಯ ಎಂದು ಅವರು ಆರೋಪಿಸಿದರು.

ಈ ನಿಟ್ಟಿನಲ್ಲಿ ಹೆಚ್ಚಿಸಿರುವ ಪ್ರಯಾಣ ದರದ ಆದೇಶವನ್ನು ಹಿಂಪಡೆ ಯುದರೊಂದಿಗೆ ಜಿಲ್ಲೆಯಲ್ಲಿ ಜನಸಂಖ್ಯೆಗನುಗುಣವಾಗಿ, ಜಿಲ್ಲೆಯ ಜನರ ಬೇಡಿಕೆಗನುಗುಣವಾಗಿ ನರ್ಮ್ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಹಾಗೂ ಎಲ್ಲ ಗ್ರಾಮೀಣ ಪ್ರದೇಶಗಳಿಗೂ ಹೊಸ ನರ್ಮ್ ಬಸ್‌ಗಳ ವ್ಯವಸ್ಥೆ ಯನ್ನು ಮಾಡಬೇಕು ಎಂದು ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಕಾಪು ವಲಯ ಸಂಚಾಲಕ ರಂಝಾನ್ ಕಾಪು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News