"ನಾಗಾಲ್ಯಾಂಡ್ ಹತ್ಯೆಗಳ ಬಗ್ಗೆ ವಿಷಾದವಿಲ್ಲ, ಕೋವಿಡ್ 2ನೇ ಅಲೆಯ ಸಾವುಗಳಿಗೆ ಕ್ಷಮೆ ಇಲ್ಲ''

Update: 2022-01-31 09:28 GMT

ಹೊಸದಿಲ್ಲಿ: ಸಂಸತ್ತಿನಲ್ಲಿ ಬಜೆಟ್ ಅಧಿವೇಶನಕ್ಕೂ ಮುನ್ನಸೋಮವಾರ  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಾಡಿದ ಭಾಷಣಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಪ್ರತಿಕ್ರಿಯಿಸಿದ್ದಾರೆ.

"ನಾಗಾಲ್ಯಾಂಡ್‌ನಲ್ಲಿ ನಾಗರಿಕರ ಹತ್ಯಾಕಾಂಡ ಅಥವಾ ಕೋವಿಡ್ -19 ರ ಎರಡನೇ ಅಲೆಯ ಸಮಯದಲ್ಲಿ ಸಂಭವಿಸಿರುವ ಸಾವಿನ ಬಗ್ಗೆ ರಾಷ್ಟ್ರಪತಿಗಳು ಏನನ್ನೂ ಹೇಳಲಿಲ್ಲ" ಎಂದು ಮನೀಶ್ ತಿವಾರಿ ಹೇಳಿದರು.

"ರಾಷ್ಟ್ರಪತಿ ಭಾಷಣದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯ ಸ್ಥಾನಮಾನ ಮರುಸ್ಥಾಪಿಸುವ ಬಗ್ಗೆ ಏನೂ ಇರಲಿಲ್ಲ. ತಾಲಿಬಾನ್ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ಭಾರತದ ಮೇಲೆ ಅದರ ಭಯೋತ್ಪಾದನೆಯ ಪರಿಣಾಮಗಳನ್ನು ಅವರ ಭಾಷಣದಲ್ಲಿ ಉಲ್ಲೇಖಿಸಲಾಗಿಲ್ಲ’’ ಎಂದರು.

ಸಂಸತ್ತಿನಲ್ಲಿ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದೊಂದಿಗೆ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News