×
Ad

ನೀವು ಮಂಗಳಗ್ರಹದಲ್ಲಿ ವಾಸಿಸುತ್ತಿದ್ದೀರಾ?: ಚುನಾವಣೆ ಮುಂದೂಡಬೇಕೆಂದು ಕೋರಿದ ಕಾಂಗ್ರೆಸ್ ನಾಯಕನಿಗೆ ಹೈಕೋರ್ಟ್ ಛೀಮಾರಿ

Update: 2022-01-31 15:46 IST

ಹೊಸದಿಲ್ಲಿ: ಕೋವಿಡ್-19ರ ಓಮೈಕ್ರಾನ್ ರೂಪಾಂತರವು ವೇಗವಾಗಿ ಹರಡುತ್ತಿದೆ ಎಂಬ ಕಾರಣಕ್ಕಾಗಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಮುಂದೂಡುವಂತೆ ಕೋರಿ ಕಾಂಗ್ರೆಸ್ ನಾಯಕರೊಬ್ಬರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲು ದಿಲ್ಲಿ ಹೈಕೋರ್ಟ್ ಸೋಮವಾರ ನಿರಾಕರಿಸಿದೆ.

ಕಾಂಗ್ರೆಸ್ ನಾಯಕ ಜಗದೀಶ್ ಶರ್ಮಾ ಅವರ ಮನವಿಯನ್ನು ‘ಕ್ಷುಲ್ಲಕ’ ಎಂದು ಬಣ್ಣಿಸಿದ ಹೈಕೋರ್ಟ್, ಕೋವಿಡ್ -19 ಪ್ರಕರಣಗಳು ಕ್ಷೀಣಿಸುತ್ತಿದ್ದು,  ಅರ್ಜಿದಾರರು ಮಂಗಳ ಗ್ರಹದಲ್ಲಿ ವಾಸಿಸುತ್ತಿದ್ದಾರೆಯೇ ಎಂದು ಕೇಳಿದೆ.

ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ಜಸ್ಮೀತ್ ಸಿಂಗ್ ಅವರ ಪೀಠ, “ಇದು ಕ್ಷುಲ್ಲಕ ಅರ್ಜಿಯಾಗಿದೆ. ನೀವು ಮಂಗಳ ಗ್ರಹದಲ್ಲಿ ವಾಸಿಸುತ್ತಿದ್ದೀರಾ? ದಿಲ್ಲಿಯಲ್ಲಿ ಈಗ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ನೀವು ಅರ್ಜಿಯನ್ನು ಹಿಂಪಡೆಯಿರಿ ಅಥವಾ ನಾವು ಅದನ್ನು ವಜಾ ಮಾಡುತ್ತೇವೆ'' ಎಂದಿತು.

ಆಗ ಅರ್ಜಿದಾರರ ಪರ ವಕೀಲರು ಮನವಿಯನ್ನು ಹಿಂಪಡೆದರು.

ಒಮೈಕ್ರಾನ್ ರೂಪಾಂತರವು ವೇಗವಾಗಿ ಹರಡುತ್ತಿರುವುದರಿಂದ ಕೋವಿಡ್-19 ರ ಮೂರನೇ ಅಲೆಯನ್ನು ಉಲ್ಲೇಖಿಸಿ  ಶರ್ಮಾ ಅವರು ಚುನಾವಣೆಗಳನ್ನು ಮುಂದೂಡಲು ನಿರ್ದೇಶನಗಳನ್ನು ನೀಡುವಂತೆ ನ್ಯಾಯಾಲಯವನ್ನುಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News