ಮೀಡಿಯಾ ಒನ್ ಸುದ್ದಿವಾಹಿನಿ ಪ್ರಸಾರ ನಿರ್ಬಂಧಕ್ಕೆ ಹೈಕೋರ್ಟ್ ತಡೆ
Update: 2022-01-31 17:01 IST
ತಿರುವನಂತಪುರಂ: ಮಲಯಾಳಂನ ಪ್ರಸಿದ್ಧ ಸುದ್ದಿ ವಾಹಿನಿ ಮೀಡಿಯಾ ಒನ್ ಪ್ರಸಾರಕ್ಕೆ ಕೇಂದ್ರ ವಾರ್ತಾ ಇಲಾಖೆ ನಿರ್ಬಂಧ ಹೇರಿತ್ತು. ಇದೀಗ ಈ ನಿರ್ಬಂಧಕ್ಕೆ ಕೇರಳ ಹೈಕೋರ್ಟ್ ತಡೆನೀಡಿದೆ ಎಂದು ತಿಳಿದು ಬಂದಿದೆ. ಈ ಕುರಿತು ವಿವರ ನೀಡುವಂತೆ ಹೈಕೋರ್ಟ್ ಕೇಂದ್ರ ಸರಕಾರವನ್ನು ಕೋರಿದ್ದು, ಅರ್ಜಿಯನ್ನು ಬುಧವಾರ ಮರು ವಿಚಾರಣೆ ನಡೆಸಲಾಗುವುದು ಎಂದು ತಿಳಿದು ಬಂದಿದೆ.
2020 ರ ಮಾರ್ಚ್ 6ರಂದು ಮೀಡಿಯಾ ಒನ್ ಮತ್ತು ಏಶ್ಯನೆಟ್ ನ್ಯೂಸ್ ಗಳ ಪ್ರಸಾರವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ತೀವ್ರ ಪ್ರತಿಭಟನೆ ಬಳಿಕ ಅದಕ್ಕೆ ಮತ್ತೆ ಅವಕಾಶ ನೀಡಲಾಗಿತ್ತು.