ಮಂಗಳೂರು ಕೇಂದ್ರ ಜುಮಾ ಮಸೀದಿಗೆ ಯು.ಟಿ. ಖಾದರ್ ಭೇಟಿ
Update: 2022-01-31 20:07 IST
ಮಂಗಳೂರು, ಜ.31: ಮಾಜಿ ಸಚಿವ, ಶಾಸಕ, ವಿಧಾನ ಸಭೆಯ ಪ್ರತಪಕ್ಷದ ನೂತನ ಉಪ ನಾಯಕ ಯು.ಟಿ. ಖಾದರ್ ನಗರದ ಬಂದರ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಗೆ ಸೋಮವಾರ ಭೇಟಿ ನೀಡಿದರು.
ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಸ್ವಾಗತಿಸಿದರು.
ಮಸೀದಿಯ ಉಪಾಧ್ಯಕ್ಷ ಕೆ.ಅಶ್ರಫ್ ಸನ್ಮಾನಿಸಿದರು. ಖತೀಬ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ, ಸದಸ್ಯರಾದ ಅದ್ದು ಹಾಜಿ, ಯೂಸುಫ್ ಕಾರ್ದಾರ್, ಕಾರ್ಪೊರೇಟರ್‌ಗಳಾದ ಝೀನತ್ ಶಂಸುದ್ದೀನ್, ಶಂಸುದ್ದೀನ್ ಎಚ್‌ಬಿಟಿ, ಅಬ್ದುಲ್ಲತೀಫ್ ಕಂದಕ್, ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿ ವಹ್ಹಾಬ್ ಕುದ್ರೋಳಿ, ಮಂಗಳೂರು ತಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು, ಸಿ.ಎಂ ಮುಸ್ತಫಾ ಮತ್ತಿತರರು ಉಪಸ್ಥಿತರಿದ್ದರು.